ಐತಿಹಾಸಿಕ ನೆಲದಲ್ಲಿ ಏರ್‌ ಶೋ ಸಂತಸದ ವಿಷಯ ಎಂದ ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯ ಏರ್‌ ಶೋಗೆ ಚಾಲನೆ ಸಿಕ್ಕಿದ್ದು, ಜಾಗತಿಕ ಆಕಾಶದಲ್ಲಿ ಭಾರತ ನಕ್ಷತ್ರವಾಗಿ ಹೊರಹೊಮ್ಮಿದೆ ಎಂಬುದಾಗಿ ಏರ್‌ ಶೋನಲ್ಲಿ ರಾಜನಾಥ ಸಿಂಗ್‌ ಮಾತನಾಡಿದರು. ಐತಿಹಾಸಿಕ ನೆಲದಲ್ಲಿ ಏರ್‌ಶೋ, ಸಂತಸದ ವಿಷಯ ಕರ್ನಾಟಕದ ಬೆಂಗಳೂರು ಏರ್‌ ಶೋ ನಡೆಸಲು ಸೂಕ್ತವಾದ ಸ್ಥಳ ಎಂದಿದ್ದಾರೆ. ಏರೋ ಇಂಡಿಯಾವು ಏರೋಸ್ಪೇಸ್‌ನ ಪ್ರದರ್ಶನವಾಗಿದ್ದು ಇದು ಪ್ರಮುಖ 2 ಗುಣಲಕ್ಷಣಗಳನ್ನು ಹೊಂದಿದೆ. ಅವುಗಳೇ ʻಎತ್ತರ ಮತ್ತು ವೇಗʼ. ಈ 2 ಗುಣಗಳು ಪ್ರಧಾನಮಂತ್ರಿಯ ಕೆಲಸ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತವೆ.

ಭಾರತಕ್ಕಾಗಿ ಸಮಗ್ರತೆ ಮತ್ತು ಬದ್ಧತೆಯ ಎತ್ತರ ಹಾಗೆಯೇ ನಿರ್ಧಾರ ತೆಗೆದುಕೊಳ್ಳುವ ಮತ್ತು ಫಲಿತಾಂಶಗಳನ್ನು ನೀಡುವ ವೇಗ ಎರಡೂ ಮುಖ್ಯ ಎಂದರು.

ಜಾಗತಿಕ ಆಕಾಶದಲ್ಲಿ ಭಾರತವು ನಕ್ಷತ್ರವಾಗಿ ಹೊರಹೊಮ್ಮಿದೆ, ಅದು ಪ್ರಕಾಶಿಸುತ್ತಿದೆ ಮಾತ್ರವಲ್ಲದೆ ತನ್ನ ಹೊಳಪಿನಿಂದ ಇತರರನ್ನು ಬೆಳಗಿಸುತ್ತದೆ ಎಂಬುದಾಗಿ ಹೇಳಿದರು. ಜೊತೆಗೆ ಇದು ಬರೀ ವೈಮಾನಿಕ ಪ್ರದರ್ಶನವಷ್ಟೇ ಅಲ್ಲ. 809 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!