ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಭಾರತ-ಪಾಕ್ ಗಡಿಯ ಬಳಿಯಿರುವ ತನೋಟ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದಿದ್ದಾರೆ. ಇಲ್ಲಿನ ಗಡಿ ಭದ್ರತಾ ಪಡೆಯ ಧೈರ್ಯ, ಶಿಸ್ತು ಮತ್ತು ರಾಷ್ಟ್ರೀಯ ಭದ್ರತೆಗೆ ನೀಡಿದ ಅಚಲವಾದ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ಜೈಸಲ್ಮೇರ್‌ಗೆ ಎರಡು ದಿನಗಳ ಭೇಟಿ ನೀಡಿರುವ ರಾಜನಾಥ್ ಸಿಂಗ್ ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಬ್ಯಾಟಲ್ ಆಕ್ಸ್ ವಿಭಾಗದ ಕಮಾಂಡರ್ ಮೇಜರ್ ಜನರಲ್ ಆಶಿಶ್ ಖುರಾನಾ ಇದ್ದರು.
ದೇವಾಲಯದಲ್ಲಿ ರಕ್ಷಣಾ ಸಚಿವರನ್ನು ಬಿಎಸ್‌ಎಫ್ ಡಿಐಜಿ ಜತಿಂದರ್ ಸಿಂಗ್ ಬಿಂಜಿ, ಕಮಾಂಡೆಂಟ್ ನೀರಜ್ ಶರ್ಮಾ ಮತ್ತು ಸಹಾಯಕ ಕಮಾಂಡೆಂಟ್ ವಿಕಾಸ್ ನಾರಾಯಣ್ ಸಿಂಗ್ ಸ್ವಾಗತಿಸಿದರು.

