ನಾಳೆ ರಾಜ್ಯಸಭೆ ಚುನಾವಣೆ: ಬಿಜೆಪಿ 66 ಶಾಸಕರಿಗೆ ವಿಪ್ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭಾ ಚುನಾವಣೆಗೆ ರಾಜ್ಯ ವಿಧಾನಸಭೆಯಲ್ಲಿ ನಾಳೆ (ಪೆ.27ರ ಮಂಗಳವಾರ) ಮತದಾನ ನಡೆಯಲಿದ್ದು, ನಾಲ್ವರ ಆಯ್ಕೆಗೆ ಎರಡು ಪಕ್ಷಗಳಲ್ಲಿ ಸ್ಪಷ್ಟ ಬಹುಮತವಿದೆ. ಆದರೆ, ಮೈತ್ರಿ ಅಭ್ಯರ್ಥಿಯ ಆಯ್ಕೆಗೆ ಮತಗಳ ಕೊರತೆಯಿದ್ದು, ಅಡ್ಡ ಮತದಾನದ ಭೀತಿ ಎದುರಾಗಿದೆ.

ಈ ನಿಟ್ಟಿನಲ್ಲಿ ಬಿಜೆಪಿಯಿಂದ 66 ಶಾಸಕರಿಗೂ ವಿಪ್‌ ಜಾರಿ ಮಾಡಲಾಗಿದೆ.

ರಾಜ್ಯಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್‌ನಿಂದ ಮೂವರು ಅಭ್ಯರ್ಥಿಗಳು, ಬಿಜೆಪಿಯಿಂದ ಒಬ್ಬರು ಹಾಗೂ ಮೈತ್ರಿ (ಬಿಜೆಪಿ-ಜೆಡಿಎಸ್‌) ಅಭ್ಯರ್ಥಿಯಾಗಿ ಒಬ್ಬರನ್ನು ಕಣಕ್ಕಿಳಿಸಲಾಗುತ್ತಿದೆ.

ವಿಧಾನಸಭೆಯಲ್ಲಿ ಒಟ್ಟು 223 ಸದಸ್ಯರಿದ್ದು, (224ರಲ್ಲಿ ನಿನ್ನೆ ಸುರಪುರ ಶಾಸಕ ರಾಜಾ ವೆಂಕಟಪಟ್ಟ ನಾಯಕ ಸಾವು ಹೊರತುಪಡಿಸಿ) ಎಲ್ಲರೂ ಮತ ಚಲಾಯಿಸಲಿದ್ದಾರೆ. ಆದರೆ, ಇಲ್ಲಿ ಒಬ್ಬ ರಾಜ್ಯಸಭಾ ಅಭ್ಯರ್ಥಿ ಗೆಲುವಿಗೆ 45 ಮತಗಳು ಅಗತ್ಯವಿದೆ. ಕಾಂಗ್ರೆಸ್‌ ಪಕ್ಷದಲ್ಲಿ 134 ಸದಸ್ಯರಿದ್ದು, ಮೂವರನ್ನು ಸರಳವಾಗಿ ಗೆಲ್ಲಿಸಿಕೊಳ್ಳಬಹುದು. ಉಳಿದಂತೆ ಬಿಜೆಪಿ 66, ಜೆಡಿಎಸ್‌ 19, ಕೆಆರ್‌ಪಿಪಿ-1, ಸರ್ವೋದಯ ಕರ್ನಾಟಕ 1 ಹಾಗೂ ಪಕ್ಷೇತರ 2 ಸದಸ್ಯರಿದ್ದಾರೆ. ಆದ್ದರಿಂದ ಬಿಜೆಪಿ ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಬಹುದಾಗಿದ್ದು, ಉಳಿದಂತೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಬಾಕಿ ಮತಗಳನ್ನು ಹಾಕುವಂತೆ ನಿರ್ದೇಶನ ನೀಡಲಾಗಿದೆ.

ಇನ್ನು ಬಿಜೆಪಿಯ 66 ಶಾಸಕರ ಪೈಕಿ 45 ಮತಗಳನ್ನು ಬಿಜೆಪಿಯ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ಹಾಕಲಿದ್ದಾರೆ. ಉಳಿಕೆ 21 ಮತಗಳನ್ನು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಹಾಕಬೇಕು. ಆದರೆ ಅಡ್ಡ ಮತದಾನ ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಹಾಗಾಗಿ ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ತಮ್ಮ ಪಕ್ಷದ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

ಪಕ್ಷಗಳ ಬಲಾಬಲವೇನು?
ಕಾಂಗ್ರೆಸ್ – 135
ಬಿಜೆಪಿ – 66
ಜೆಎಇಎಸ್‌ -19
ಕೆಆರ್‌ಪಿಪಿ -1
ಸರ್ವೋದಯ- 1
ಪಕ್ಷೇತರ -2
ಒಟ್ಟು- 224

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!