ರಾಜ್ಯಸಭೆ ಚುನಾವಣೆಯ ಮತದಾನದ ಸಮಯ ಮುಕ್ತಾಯ: 222 ಶಾಸಕರಿಂದ ವೋಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆ ಚುನಾವಣೆಯ ಮತದಾನದ ಸಮಯ ಮುಕ್ತಾಯವಾಗಿದ್ದು, ಇದುವರೆಗೆ 222 ಮಂದಿ ಶಾಸಕರು ಮತದಾನ ಮಾಡಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 6 ರಲ್ಲಿ ಮತದಾನ ನಡೆದಿತ್ತು, 223 ಮತಗಳ ಪೈಕಿ 222 ಮಂದಿ ಮತದಾನ ಮಾಡಿದ್ದಾರೆ.

ಶಾಸಕ ಶಿವರಾಜ್ ಹೆಬ್ಬಾರ್ ಮಾತ್ರ ಮತದಾನ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದೆ.

ಕಾಂಗ್ರೆಸ್ ನ 137 ಶಾಸಕರು, ಬಿಜೆಪಿಯ 65, ಜೆಡಿಎಸ್ ನ 19 ಮಂದಿ ಹಾಗೂ ಪಕ್ಷೇತರರ ನಾಲ್ವರು ಮಂದಿ ಶಾಸಕರು ಮತ ಚಲಾಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!