ಹೊಸದಿಗಂತ ವರದಿ ಯಲ್ಲಾಪುರ:
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕರು, ಶಿಕ್ಷಣ ಪ್ರೇಮಿಗಳು, ಧಾರ್ಮಿಕ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದಂತಹ ಎನ್ ಎಸ್ ಹೆಗಡೆ ಕುಂದರಗಿಯವರು (90) ತಮ್ಮ ಸ್ವಗೃಹದಲ್ಲಿ ಗುರುವಾರ ಬೆಳಗಿನಜಾವ ನಿಧನರಾಗಿದ್ದಾರೆ.
ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಹಕಾರಿ ರಂಗ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯೂ ಸಹ ತಮ್ಮ ಕೈಲಾದ ಸೇವೆಯನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಮೇಲ್ಪಂಕ್ತಿಯಾಗಿದ್ದರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಮ್ಮ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದ್ದು, ನಮ್ಮುರಿನ ಹೆಮ್ಮೆಯ ರತ್ನ ಶಿಕ್ಷಣ ಪ್ರೇಮಿಗಳು ಧಾರ್ಮಿಕ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದಂತಹ ಎನ್ ಎಸ್ ಹೆಗಡೆ ಕುಂದರಗಿಯವರನಮ್ಮ ಸಮಾಜಕ್ಕೆ ಅವರ ಕೊಡುಗೆ ಅಪಾರ ಅವರನ್ನು ಕಳೆದು ಕೊಂಡಂತ ನಮ್ಮ ಸಮಾಜ ಬಡವಾಗಿರುವುದಂತ ಸತ್ಯ ಎಂದು ಗಣ್ಯ ರನೇಕರು ಕಂಬನಿ ಮಿಡಿದಿದ್ದಾರೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸುದ್ದಿ ತಿಳಿದ ಕೂಡಲೇ ಕುಂದರ್ಗಿ ಗೆ ತೆರಳಿ ಎನ್ ಎಸ್ ಹೆಗಡೆ ಪಾರ್ಥಿವ ಶರೀರ ದ ಅಂತಿಮದರ್ಶನ್ ಪಡೆದು ದುಃಖ ವ್ಯಕ್ತ ಪಡಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಹಕಾರಿ ಹಾಗೂ ಯಲ್ಲಾಪುರ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಕೈಗೊಂಡ ಹಿರಿಯ ಚೇತನ ಶ್ರೀ ಎನ್.ಎಸ್.ಹೆಗಡೆ ಕುಂದರಗಿ ಅವರ ಅಗಲಿಕೆ ಸಮಾಜಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ.
ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅವರು ಶಿಕ್ಷಣ ಕ್ಷೇತ್ರ, ಸಹಕಾರಿ, ಧಾರ್ಮಿಕ ಕ್ಷೇತ್ರ ಹಾಗೂ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ತಮ್ಮದೆ ಆದ ಸೇವೆಯನ್ನು ನೀಡಿದರು.ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಜಿಲ್ಲೆಯ ರೈತರ ಕಷ್ಟಗಳಿಗೆ ಹೆಗಲಾದಗಿದ್ದ ಅವರ
ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ.ಎಂದಿದ್ದಾರೆ.