ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ವರ್ಷದ ಮಗುವಿನ ಜೊತೆ ಬೃಹತ್ ಕಟ್ಟಡದ ಮಹಡಿ ಮೇಲಿಂದ ಮಹಿಳೆ ಬಿದ್ದಿದ್ದು, ಮಗು ಹಾಗೂ ಮಹಿಳೆ ಇಬ್ಬರೂ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಘಟನೆ ನಡೆದಿದ್ದು, ಪತಿಯ ಜೊತೆ ಜಗಳದಿಂದಾಗಿ ಮಹಿಳೆ ಈ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಿಯಾಂಕ ಮೋಹಿತೆ ತನ್ನ ಪತಿ ಹಾಗೂ ಮಗನ ಜೊತೆ ಘೋಡ್‌ಬಂದರ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ರಕ್ಷಾಬಂಧನಕ್ಕೆ ತವರು ಮನೆಗೆ ಹೋಗುತ್ತೀನಿ ಎಂದು ಪ್ರಿಯಾಂಕ ಹೇಳಿದ್ದಾರೆ. ಮಗು ಇನ್ನೂ ಸಣ್ಣವನು ಅವನ ಜೊತೆ ಅಷ್ಟು ದೂರ ಪ್ರಯಾಣ ಸುರಕ್ಷಿತವಲ್ಲ ಎಂದು ಪತಿ ಹೇಳಿದ್ದಾರೆ. ಇದೇ ವಿಷಯಕ್ಕೆ ಜಗಳ ಹೆಚ್ಚಾಗಿದ್ದು, ಸಿಟ್ಟಿನಲ್ಲಿ ಫ್ಲಾಟ್‌ನ ಬಾಲ್ಕನಿಗೆ ತೆರಳಿ ಮೇಲಿನಿಂದ ಮಗು ಸಮೇತ ಪ್ರಿಯಾಂಕ ಹಾರಿದ್ದಾರೆ.
ದೊಡ್ಡ ಶಬ್ದಕ್ಕೆ ನಿವಾಸಿಗಳು ಹೊರಬಂದಿದ್ದು, ತಾಯಿ ಮಗು ರಕ್ತದ ಮಡುವಿನಲ್ಲಿ ಇಬ್ಬರೂ ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.
ಗಂಡ ಹೆಂಡತಿಯ ನಡುವೆ ಎಷ್ಟೇ ಮನಸ್ತಾಪ ಇರಲಿ, ಸಿಟ್ಟಿನ ಕ್ಷಣದಲ್ಲಿ ದುಡುಕಬೇಡಿ. ಪ್ರಾಯಶಃ ಆ ಕ್ಷಣ ಕಳೆದು ಹೋಗಿದ್ದರೆ ಜೀವನವೇ ಬೇರೆ ರೀತಿ ಇರುತ್ತಿತ್ತು, ಅಲ್ವಾ?