ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ನಟಿ ರಾಖಿ ಸಾವಂತ್ ಹಾಗೂ ಮೈಸೂರು ಮೂಲದ ಆದಿಲ್ ಖಾನ್ ಮದುವೆ ಫೋಟೊಗಳು ವೈರಲ್ ಆಗಿತ್ತು. ಮದುವೆಯಾದ ಆರು ತಿಂಗಳ ನಂತರ ರಿಜಿಸ್ಟರ್ ಮದುವೆ ಹಾಗೂ ನಿಖಾ ಫೋಟೊಗಳು ವೈರಲ್ ಆಗಿತ್ತು. ಆದರೆ ಇದೀಗ ಆದಿಲ್ ನನಗೆ ಮದುವೆಯೇ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ರಾಖಿ ದೂರಿದ್ದಾರೆ.
ಆರು ತಿಂಗಳ ಹಿಂದೆಯೇ ನಮ್ಮ ಮದುವೆ ಆಗಿದೆ. ನನ್ನ ತಂಗಿ ಮದುವೆ ಆಗೋವರೆಗೂ ನಮ್ಮ ಮದುವೆ ವಿಷಯ ಹೊರಬರೋದು ಬೇಡ ಎಂದು ಆದಿಲ್ ಹೇಳಿದ್ದರು. ಅವರ ಮಾತಿಗೆ ಬೆಲೆಕೊಟ್ಟು ಸುಮ್ಮನಾದೆ. ಆದಿಲ್ ಮನೆಯವರಿಗಾಗಿ, ಅವರಿಗಾಗಿ ನಾನು ಫಾತಿಮಾ ಆಗಿ ಬದಲಾಗಿದ್ದೆ. ಇಷ್ಟೆಲ್ಲಾ ಮಾಡಿದರೂ ಇದೀಗ ನನಗೆ ಮೋಸ ಮಾಡುತ್ತಿದ್ದಾರೆ.
ಸಾಕಷ್ಟು ಟ್ರಿಪ್ ಮಾಡಿದ್ದೇನೆ. ಮೈಸೂರಿಗೆ ಭೇಟಿ ನೀಡಿ ಆದಿಲ್ ಪೋಷಕರನ್ನೂ ಭೇಟಿ ಮಾಡಿದ್ದೇನೆ. ನಿಮಗೆ ಹೇಗೆ ಬೇಕೋ ಹಾಗೆ ನಾನು ಬದಲಾಗುತ್ತೀನಿ ಎಂದು ಹೇಳಿದ್ದೇನೆ. ಇದಕ್ಕಿಂಥ ಇನ್ನೇನು ಮಾಡಲು ಸಾಧ್ಯ. ಹೀಗಿದ್ದರೂ ನನಗೆ ಮೋಸ ಮಾಡೋಕೆ ಮನಸ್ಸು ಹೇಗೆ ಬಂತು ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.
ಮರಾಠಿ ಬಿಗ್‌ಬಾಸ್‌ನಲ್ಲಿದ್ದ ರಾಖಿ ತಾಯಿಗೆ ಕ್ಯಾನ್ಸರ್ ಕಾರಣ ಹೊರಬಂದಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ಫೋಟೊಗಳು ವೈರಲ್ ಆಗಿವೆ. ಈ ಬಗ್ಗೆ ಆದಿಲ್ ಈವರೆಗೂ ಮೌನ ಮುರಿದಿಲ್ಲ.