ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶದಲ್ಲಿ ರಕ್ಷಾ ಬಂಧನ ಸಂಭ್ರಮ. ಈ ಕ್ಷಣ ಕುಸ್ತಿಪಟು ವಿನೇಶ್ ಫೋಗಟ್ಗೆ ಸಹೋದರ ವಿಶೇಷ ಉಡುಗೊರೆ ನೀಡಿದ್ದಾರೆ. ಅಣ್ಣನ ಗಿಫ್ಟ್ ಕುರಿತು ವಿನೇಶ್ ಭಾವುಕ ಕ್ಷಣದ ಪೋಸ್ಟ್ ಹಾಕಿದ್ದಾರೆ.
ವಿನೇಶ್, 500 ರೂ. ಮುಖಬೆಲೆ ನೋಟುಗಳ ಕಂತೆ ಹಿಡಿದಿರುವ ವಿಶೇಷ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‘ನನಗೆ ಹತ್ತಿರತ್ತಿರ 30 ವರ್ಷ. ಕಳೆದ ವರ್ಷ ಅಣ್ಣ ನನಗೆ 500 ರೂ. ನೀಡಿದ್ದ. ಈಗ, ಇಲ್ಲಿವರೆಗೆ ತಾನು ದುಡಿದು ಕೂಡಿಟ್ಟಿದ್ದ ಹಣವನ್ನು ಅಣ್ಣ ನನಗೆ ನೀಡಿದ್ದಾನೆ ಎಂದು ನೋಟಿನ ಕಂತೆಯನ್ನು ತೋರಿಸುತ್ತಾ ಕುಸ್ತಿಪಟು ಹೇಳಿಕೊಂಡಿದ್ದಾರೆ. ಈ ವೇಳೆ ಸಹೋದರ ಕೂಡ ಜೊತೆಗಿದ್ದಾರೆ.
https://x.com/ians_india/status/1825438914150043781?ref_src=twsrc%5Etfw%7Ctwcamp%5Etweetembed%7Ctwterm%5E1825438914150043781%7Ctwgr%5E35fe78928af9e73ed997bb3921fcdf77f167018c%7Ctwcon%5Es1_&ref_url=https%3A%2F%2Fpublictv.in%2Fvinesh-phogat-reveals-special-gift-from-brother-on-raksha-bandhan%2F
2024 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಮರಳಿದ ವಿನೇಶ್ ಫೋಗಟ್ಗೆ ದೇಶಾದ್ಯಂತ ಪ್ರೀತಿಯ ಸ್ವಾಗತ ಸಿಕ್ಕಿದೆ.