ಮಲಯಾಳಂ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ: ಹೇಮಾ ಸಮಿತಿ ವರದಿಯಲ್ಲಿದೆ ಶಾಕಿಂಗ್ ಸಂಗತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2017ರಲ್ಲಿ ಮಲಯಾಳಂ ಸಿನಿಮಾ ರಂಗದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ವರದಿ ನೀಡಲು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು ಕೇರಳ ಸರಕಾರ ರಚಿಸಿತ್ತು.ಇದೀಗ ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಈಗ ಆರ್ ಟಿಐ ಮೂಲಕ ವರದಿಯು ಬಹಿರಂಗಗೊಂಡಿದೆ.

ವರದಿ ಪ್ರಕಾರ , ಮಲಯಾಳಂ ಸಿನಿಮಾ ರಂಗ ಕೆಲವು ಪುರುಷ ಹಿಡಿತದಲ್ಲಿದ್ದು, ಅವರು ಹೇಳಿದಂತೆ ಕೇಳದೇ ಇದ್ದರೆ, ಯಾವ ನಟಿಯರಿಗೂ ಅಲ್ಲಿ ಅವಕಾಶ ಸಿಗುವುದಿಲ್ಲ. ಮಹಿಳೆಯರು ಚಿತ್ರೋದ್ಯಮದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು, ಇಲ್ಲ ಚಿತ್ರೋದ್ಯಮವನ್ನು ತೊರೆಯಬೇಕು ಅನ್ನು ಅಂಶಗಳನ್ನ ಉಲ್ಲೇಖ ಮಾಡಲಾಗಿದೆ.

ಚಿತ್ರೋದ್ಯಮದಲ್ಲಿ ಮಾಫಿಯಾ ಎಂಟ್ರಿ ಕೊಟ್ಟಿದೆ ಅನ್ನೋ ಅಂಶವೂ ಸೇರ್ಪಡೆಯಾಗಿದೆ. ವರದಿಯ ಅಧ್ಯಯನದ ಸಂದರ್ಭದಲ್ಲಿ ಮಲಯಾಳಂ ಚಿತ್ರೋದ್ಯಮವು ಕೆಲ ನಿರ್ಮಾಪಕರ, ನಿರ್ದೇಶಕರ ಹಾಗೂ ನಟರ ಹಿಡಿತದಲ್ಲಿರುವುದು ಕಂಡು ಬಂದಿದೆ. ಇದಿಷ್ಟೇ ಜನರು ಮಲಯಾಳಂ ಚಿತ್ರೋದ್ಯಮವನ್ನ ನಿಯಂತ್ರಿಸುತ್ತಿದ್ದಾರೆ. ಈ ಉದ್ಯಮವು ಅಪರಾಧಿಗಳ ಮತ್ತು ಸ್ತ್ರೀ ದ್ವೇಷಿಗಳಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮಹಿಳೆಯರು ಚಿತ್ರೋದ್ಯಮಕ್ಕೆ ಹಣ ಮಾಡಲು ಬರುತ್ತಿದ್ದಾರೆ. ಹಾಗಾಗಿ ಅವರು ಎಲ್ಲದಕ್ಕೂ ರೆಡಿ ಆಗಿರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದು ನಿಜವಾದದ್ದು ಅಲ್ಲ. ಕಲೆ ಮತ್ತು ನಟನೆಯ ಮೇಲಿನ ಆಸಕ್ತಿ ಕಾರಣದಿಂದಾಗಿ ಮಹಿಳೆಯರು ಸಿನಮಾ ರಂಗಕ್ಕೆ ಬರುತ್ತಿದ್ದಾರೆ. ಕೆಲವರು ಅವಕಾಶ ಪಡೆಯಲು ಅಡ್ಡದಾರಿಯನ್ನೂ ಹಿಡಿದಿದ್ದಾರೆ. ಇದರ ಜೊತೆಗೆ ತಮ್ಮ ನಿಯಮಗಳಿಗೆ ಒಪ್ಪುವಂಥ ಮಹಿಳೆಯರ ಗುಂಪು ಕೂಡ ಅಲ್ಲಿ ರಚನೆಯಾಗಿದ್ದು, ಅವರನ್ನು ಕೋಡ್‍ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಎಷ್ಟೋ ಮಹಿಳೆಯರು ಪಾತ್ರಗಳಿಗಾಗಿ ಈ ರೀತಿ ಗುಂಪಿಗೆ ಸೇರಿದ್ದಾರೆ ಅನ್ನೋ ಆತಂಕಕಾರಿ ಅಂಶ ಕೂಡ ವರದಿಯಲ್ಲಿದೆ.

ನಟಿಯೊಬ್ಬಳು ನಟನಿಂದ ದೌರ್ಜನ್ಯಕ್ಕೆ ಒಳಗಾಗಿ, ಮರುದಿನವೇ ಆಕೆ ಆತನೊಂದಿಗೆ ಪತ್ನಿಯಾಗಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆಘಾತದಲ್ಲಿದ್ದ ನಟಿಯು ಆ ದೃಶ್ಯವನ್ನು ಎದುರಿಸೋಕೆ ಆಗದೇ 17 ಟೇಕ್‍ ಗಳನ್ನು ತೆಗೆದುಕೊಂಡಳು. ಮತ್ತು ಅವನನ್ನು ಎದುರಿಸೋಕೆ ಆಗದೇ ದೃಶ್ಯ ಮುಗಿಸಲು ಹರಸಾಹಸ ಪಟ್ಟಳು. ಆ ದೃಶ್ಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂಥ ದೃಶ್ಯವಿತ್ತು. ನಿಜಕ್ಕೂ ಅದು ಭಯಾನಕ ಆಗಿತ್ತು ಎಂದು ಆ ನಟಿ ಹೇಳಿಕೊಂಡಿದ್ದಾಳೆ.

ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರ ಮನೆ ಬಾಗಿಲುಗಳು ಅಥವಾ ತಂಗಿದ ಸ್ಥಳಗಳ ಬಾಗಿಲುಗಳು ಬಡಿದುಕೊಳ್ಳುತ್ತಲೇ ಇರುತ್ತವೆ. ನಟಿಯರು ಸ್ಪಂದಿಸದೇ ಹೋದರೆ, ಬಾಗಿಲು ಬಡಿತ ಇನ್ನೂ ಜೋರಾಗುತ್ತವೆ ಎಂದು ಮತ್ತೋರ್ವ ನಟಿಯೊಬ್ಬರು ಸಮಿತಿಯ ಮುಂದೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

ಜೀವಭಯ ಕಾರಣದಿಂದಾಗಿ ಪೊಲೀಸರನ್ನು ಸಂಪರ್ಕಿಸಲು ಸಾಕಷ್ಟು ಜನರು ಹಿಂದೇಟು ಹಾಕಿದ್ದಾರೆ. ಧೈರ್ಯದಿಂದ ದೂರು ನೀಡಿದರೆ, ಆ ನಟಿಯ ಬದುಕೇ ಮುಗಿದು ಹೋಗುತ್ತದೆ ಅನ್ನೋ ಅಂಶ ಕೂಡ ಉಲ್ಲೇಖವಾಗಿದೆ.

ನಟಿಯ ವೃತ್ತಿ ಜೀವನ ಮುಗಿಸುವುದರ ಜೊತೆಗೆ ಆ ಕುಟುಂಬಗಳನ್ನು ಗುರಿಯಾಗಿಸಿ ನಿತ್ಯ ಬೆದರಿಕೆ ಹಾಕಲಾಗುತ್ತದೆ ಎನ್ನುವುದನ್ನೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಕುಟುಂಬಕ್ಕೆ ಬೆದರಿಕೆ ಜೊತೆಗೆ ಮತ್ತೆ ಅವಕಾಶ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ಅನೇಕ ನಟಿಯರು ಮೌನಕ್ಕೆ ಜಾರಿದ್ದಾರೆ .

ಜ್ಯೂನಿಯರ್ ಆರ್ಟಿಸ್ಟ್ ಕುರಿತಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಲೈಂಗಿಕ ಹೊಂದಾಣಿಕೆ ಇರದೇ ಹೋದರೆ ಜ್ಯೂನಿಯರ್ ಕಲಾವಿದರಿಗೆ ಅವಕಾಶವೇ ಸಿಗೋದಿಲ್ಲ . ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡು ಜ್ಯೂನಿಯರ್ ಆರ್ಟಿಸ್ಟ್ ಸಂಯೋಜಕರು ಮತ್ತು ಮ್ಯಾನೇಜರ್ ಗಳು ನಿತ್ಯ ಕಿರುಕುಳ ನೀಡುತ್ತಲೇ ಇರುತ್ತಾರೆ. ಕೆಲಸ ಬೇಕು ಅಂದರೆ ಸಹಕರಿಸಲೇಬೇಕು ಎಂಬ ಆಘಾತಕಾರಿ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!