ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳು ಕ್ಲಿನ್ ಕಾರ ಹುಟ್ಟಿದ ನಂತರ ಚರಣ್-ಉಪಾಸನಾ ಮೊದಲ ಬಾರಿಗೆ ಒಟ್ಟೊಗೆ ವಿದೇಶಿ ಪ್ರವಾಸ ಕೈಗೊಂಡಿದ್ದು, ಪ್ಯಾರಿಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಉಪಾಸನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ರಾಮ್ ಚರಣ್ ದಂಪತಿ ಪ್ಯಾರಿಸ್ ಗೆ ಹೋಗಿರುವುದು ಉಪಾಸನಾ ಸ್ನೇಹಿತೆ ರೋಸ್ಮಿನ್ ಮದುವೆಗಾಗಿ. ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ರೋಸ್ಮಿನ್ ಅಂತರಾಷ್ಟ್ರೀಯವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೆ, ಫ್ಯಾಷನ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಉಪಾಸನಾಗೆ ತುಂಬಾ ಹತ್ತಿರವಾದ ಸ್ನೇಹಿತೆ. ಅದಕ್ಕಾಗಿಯೇ ಉಪಾಸನಾ ಮತ್ತು ರಾಮ್ ಚರಣ್ ರೋಸ್ಮಿನ್ ಮದುವೆಗೆ ಪ್ಯಾರಿಸ್‌ಗೆ ಹೋಗಿದ್ದಾರೆ.
ಉಪಾಸನಾ ಅವರು ತಮ್ಮ ಸ್ನೇಹಿತರೊಂದಿಗೆ ಮದುವೆಯನ್ನು ಆನಂದಿಸುತ್ತಿರುವ ಕೆಲವು ಫೋಟೋಗಳು ಮತ್ತು ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.