ರಾಮ್ ಚರಣ್ ಪತ್ನಿ ಉಪಾಸನಾ ನೀಡಿದ್ರು ಸಿಂಗಲ್​ ಮದರ್ಸ್ ಗಳಿಗೆ ಗುಡ್ ನ್ಯೂಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೌತ್‌ ಸೂಪರ್‌ ಸ್ಟಾರ್‌ ರಾಮ್ ಚರಣ್ ಮನೆಯಲ್ಲಿ ಈಗ ಪುಟ್ಟ ಕಂದಮ್ಮನ ಆಟದ ಸಂಭ್ರಮ.

ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಳೆದ ಜೂನ್​ ತಿಂಗಳಿನಲ್ಲಿ ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಕ್ಲಿಂಕಾರಳ ಎಂಬ ಹೆಸರನ್ನು ಇಟ್ಟಿದ್ದರು.

11ನೇ ವರ್ಷಗಳ ಬಳಿಕ ತಾಯಿಯಾಗಿರುವ ಖುಷಿಯಲ್ಲಿರುವ ಉಪಾಸನಾ ಒಂಟಿ ತಾಯಂದಿರಿಗೆ (Single Mother) ಶುಭ ಸುದ್ದಿಯೊಂದನ್ನು ನೀಡಿದ್ದಾರೆ.

ಹೌದು, ಸಿಎಸ್ಆರ್-ಅಪೋಲೋ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ಉಪಾಸನಾ ಅವರು, ಸಿಂಗಲ್​ ಮದರ್​ ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ಚಿಕಿತ್ಸೆಗಾಗಿ ಅಪೋಲೋ (Apolo) ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಹೇಳಿದ್ದಾರೆ.

ಉಪಾಸನಾ ಅವರು ಅಪೋಲೋ ಚಿಲ್ಡ್ರನ್ಸ್ ಬ್ರ್ಯಾಂಡ್ ಅನ್ನು ಅಪೋಲೋ ಆಸ್ಪತ್ರೆಗಳ ಸಹಯೋಗದೊಂದಿಗೆ ಪ್ರಾರಂಭಿಸಿದ್ದು, ಇಲ್ಲಿ ಒಂಟಿ ತಾಯಂದಿರು ಅನುಭವಿಸುತ್ತಿರುವ ನೋವಿನ ಕುರಿತು ಮಾತನಾಡಿದ್ದಾರೆ.

ಗರ್ಭಧಾರಣೆಯಿಂದ ಹೆರಿಗೆಯವರೆಗಿನ ಪಯಣ ಅವಿಸ್ಮರಣೀಯ. ಈ ಸಮಯದಲ್ಲಿ ಸಹಕರಿಸಿದವರ ಉಪಕಾರ ಸ್ಮರಿಸಿದ ಉಪಾಸನಾ, ಅಪೋಲೋ ಮಕ್ಕಳ ಆಸ್ಪತ್ರೆಗಳನ್ನು ಪ್ರಾರಂಭಿಸುತ್ತಿರುವ ಕುರಿತು ಹೇಳಿಕೊಂಡರು.

ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಪೋಷಕರಿಗೆ ತುಂಬಾ ತೊಂದರೆಯಾಗುತ್ತದೆ. ಅಂತಹ ಮಕ್ಕಳನ್ನು ಅವರ ತಂದೆ-ತಾಯಿಗೆ ಸಂಪೂರ್ಣ ಆರೋಗ್ಯವಂತರಾಗಿ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಕೆಲವು ತಾಯಂದಿರು ಮಗುವಿಗೆ ಜನ್ಮ ನೀಡಿ ಕಷ್ಟಪಡುವುದನ್ನು ನೋಡಿದ್ದೇನೆ. ಅವರಲ್ಲಿ ಒಂಟಿ ತಾಯಂದಿರಿದ್ದು ಅವರಿಗೆ ಆಸರೆ ಬೇಕು ಹಾಗಾಗಿ ಈ ಸೇವೆ ನೀಡಲು ಮುಂದಾಗಿರುವುದಾಗಿ ಅವರು ತಿಳಿಸಿದರು.

ಸಿಂಗಲ್​ ಮದರ್​ ಆದವರು ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ (OPD) ಅಪೊಲೊ ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಅವರು ಘೋಷಿಸಿದರು.

ಇದೇ ಸಂದರ್ಭ ತಮ್ಮ ಪತಿ ರಾಮ್​ ಚರಣ್​ (Ram Charan) ಕುರಿತೂ ಮಾತನಾಡಿದ ಅವರು, ನನಗೆ ಒಳ್ಳೆಯ ಗಂಡ ಸಿಕ್ಕಿದ್ದಾರೆ. ಇದು ನನ್ನ ಅದೃಷ್ಟ. ಮಗುವಿನ ಲಾಲನೆ ಪಾಲನೆಯಲ್ಲಿ ಅವರು ವಿಶೇಷ ಕಾಳಜಿ ತೋರುತ್ತಾರೆ. ಅದರೆ ಎಲ್ಲ ಮಹಿಳೆಯರಿಗೂ ಈ ಅದೃಷ್ಟವಿರುವುದಿಲ್ಲ. ಒಂಟಿ ತಾಯಂದಿರ ಸಮಸ್ಯೆ ನಾನು ಬಲ್ಲೆ. ಗಂಡನ ಸಹಾಯವಿಲ್ಲದೆ ಮಕ್ಕಳನ್ನು ಸಾಕುವ ತಾಯಂದಿರ ನೋವು ಹೇಗಿರುತ್ತೆ ಎನ್ನುವುದನ್ನು ನನಗೆ ಗೊತ್ತು. ಆದ್ದರಿಂದ ಒಂಟಿ ಅಮ್ಮಂದಿರಿಗೆ ನೆರವಾಗುವುದು ತಮ್ಮ ಉದ್ದೇಶ. ಅವರು ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಅಪೊಲೊ ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!