ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿ ನೋಡಿತ್ತು. ವರ್ಷಗಳಿಂದ ಜನರು ಕಾಯುತ್ತಿದ್ದ ಕ್ಷಣ ಕಡೆಗೂ ನನಸಾಗಿತ್ತು.
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮಲಲಾ ಮೂರ್ತಿ ಪ್ರತಿಷ್ಠಾಪನೆಯ ಪ್ರತಿ ವಿಧಿ ವಿಧಾನದಲ್ಲಿಯೂ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಈ ಬಗ್ಗೆ ವಿಶೇಷ ವಿಡಿಯೋವೊಂದನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಜನರ ನಗು, ಆನಂದ ಭಾಷ್ಪ, ಖುಷಿ, ಗಾಂಭೀರ್ಯ ಎಲ್ಲವೂ ವಿಡಿಯೋದಲ್ಲಿದೆ. ನಾವು ನಿನ್ನೆ ಅಯೋಧ್ಯೆಯಲ್ಲಿ ಕಂಡಿದ್ದು ಇದನ್ನೇ, ಒಂದು ದಿನದ ನೆನಪುಗಳು ಎಷ್ಟು ವರ್ಷಗಳು ಕರೆದರೂ ಮಾಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಿಸ್ ಮಾಡದೇ ವಿಡಿಯೋ ನೋಡಿ..
What we saw in Ayodhya yesterday, 22nd January, will be etched in our memories for years to come. pic.twitter.com/8SXnFGnyWg
— Narendra Modi (@narendramodi) January 23, 2024