ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜಕ್ಕೆ ಬೆದರಿಕೆಯಾಗುವ ಯಾರೇ ಆಗಿದ್ದರೂ ಅವರಿಗೆ ‘ರಾಮ್ ನಾಮ್ ಸತ್ಯ’ ಗತಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಿಮಿನಲ್ಸ್, ಗೂಂಡಾ, ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಲಿಘಡದಲ್ಲಿ ಆಯೋಜಿಸಿದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಕ್ರಿಮಿನಲ್‌ಗಳುಇಂದು ಜೈಲಿಗೆ ಹೋಗಲು ಭಯಪಡುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಆಡಳಿತದಲ್ಲಿ ಹೇಗಿತ್ತು? ಗೂಂಡಾಗಳು , ಕ್ರಿಮಿನಲ್‌ಗಳು ರಾಜಾರೋಶವಾಗಿ ತಿರುಗಾಡುತ್ತಿದ್ದರು. ಗ್ಯಾಂಗ್‌ಸ್ಟರ್ ಹಾಡಹಗಲೇ ಜನನಾಯಕರನ್ನು ಹತ್ಯೆ ಮಾಡುತ್ತಿದ್ದರು. ಪ್ರಕರಣ ದಾಖಲಾದರೂ ಶಿಕ್ಷೆ ಆಗುತ್ತಿರಲಿಲ್ಲ, ಈ ಗೂಂಡಾಗಳನ್ನು ಜೈಲಿಗೆ ಹಾಕುತ್ತಿರಲಿಲ್ಲ. ಆದರೆ ಶೂನ್ಯ ಸಹಿಷ್ಣುತೆ. ಯಾರೇ ಆದರೂ ಆತನಿಗೆ ಶಿಕ್ಷೆ ಪಕ್ಕ ಎಂದಿದ್ದಾರೆ.
ಇಲ್ಲಿ ಕ್ರಿಮಿನಲ್ಸ್ ಬಾಲ ಬಿಚ್ಚಿದ್ದರೆ ರಾಮ್ ನಾಮ್ ಸತ್ಯ ಗತಿ( ಅಂತಿಮ ಸಂಸ್ಕಾರದ ವೇಳೆ ಹೇಳುವ ಘೋಷಣಾ ಜಪ). ಈ ಹಿಂದೆ ಅಪರಾಧಿಗಳು ತಮ್ಮ ಜಾಮೀನು ರದ್ದು ಮಾಡಿ ಜೈಲಿನಲ್ಲೇ ಸುರಕ್ಷಿತವಾಗಿದ್ದರು. ಜೈಲಿನಿಂದಲೇ ತಮ್ಮ ಕೆಲಸ ಮಾಡುತ್ತಿದ್ದರು. ಇದೀಗ ಜೈಲಿನಲ್ಲೂ ಕ್ರಿಮಿನಲ್ಸ್ ಬೆವರುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾವು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾ ನಮ್ಮ ಜೀವನವನ್ನು ನಡೆಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ. ಆದರೆ ಯಾರಾದರೂ ಸಮಾಜದ ಭದ್ರತೆಗೆ ಧಕ್ಕೆ ತಂದರೆ ‘ರಾಮ ನಾಮ ಸತ್ಯ’ ಕೂಡ ನಿಶ್ಚಿತ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಹಿಂದಿನ ಸರ್ಕಾರಗಳಲ್ಲಿ ಉತ್ತರ ಪ್ರದೇಶದ ಪೊಲೀಸ್ ಠಾಣೆ ಕತ್ತಲಾದ ಮೇಲೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಇತ್ತ ಗ್ಯಾಂಗ್‌ಸ್ಟರ್, ಕ್ರಿಮಿನಲ್ಸ್‌ಗಳೇ ನಾಯಕರಾಗಿದ್ದರು. ಇದೀಗ ಉತ್ತರ ಪ್ರದೇಶ ಬದಲಾಗಿದೆ. ಕಾನೂನು ಸುವ್ಯವಸ್ಥೆಗೆ ಮಹತ್ವ ನೀಡಲಾಗಿದ್ದು, ಶಾಂತಿ ಕಾಪಾಡಲಾಗುತ್ತದೆ ಎಂದಿದ್ದಾರೆ.