Tuesday, October 3, 2023

Latest Posts

ಸೆಪ್ಟೆಂಬರ್ 15ಕ್ಕೆ ತೆರೆ ಕಾಣಲಿದೆ ರಾಮ್​ ಪೋತಿನೇನಿ-ಶ್ರೀಲೀಲಾ ನಟನೆಯ ʼಸ್ಕಂದʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಾಲಿವುಡ್​ ಸ್ಟಾರ್​ ಹೀರೋ ರಾಮ್​ ಪೋತಿನೇನಿ ಮತ್ತು ಕನ್ನಡದ ನಟಿ ಶೀಲೀಲಾ ಅಭಿನಯದ ಬಹುನಿರೀಕ್ಷಿತ ಚಿತ್ರ ಸ್ಕಂದ. ಈ ಸಿನಿಮಾವು ಸೆಪ್ಟೆಂಬರ್ 15 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ಬೋಯಾಟಿ ಶ್ರೀನು ನಿರ್ದೇಶಿಸಿರುವ ಆಕ್ಷನ್, ರೋಮ್ಯಾನ್ಸ್, ಎಂಟರ್ಟೈನರ್ ಕಥಾಂದರ ಹೊಂದಿರುವ ಈ ಚಿತ್ರದಲ್ಲಿ ರಾಮ್ ಪೋತಿನೇನಿ ಮತ್ತು ಶೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶ್ರೀನಿವಾಸ್​ ಸಿಲ್ವರ್​ ಸ್ಕ್ರೀನ್​​ ಬ್ಯಾನರ್​ ಅಡಿ ಶ್ರೀನಿವಾಸ್​ ಚಿತ್ತೂರಿ ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ಜೀ ಸ್ಟುಡಿಯೋಸ್​ ಸೌತ್ ಹಾಗೂ ಪವನ್​ ಕುಮಾರ್​ ಅರ್ಪಿಸುತ್ತಿರುವ ಸಿನಿಮಾ ಸೆ. 15 ರಂದು ಬಿಡುಗಡೆಯಾಗಲು ಸಜ್ಜಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!