Tuesday, March 21, 2023

Latest Posts

ರಾಮ್ ರಹೀಮ್ ಸರಣಿ ಹಂತಕ ಅಲ್ಲ: ಪೆರೋಲ್ ಅನ್ನು ಸಮರ್ಥಿಸಿಕೊಂಡ ಹರಿಯಾಣ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :
 
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ನೀಡಿರುವ ಪೆರೋಲ್ ಅನ್ನು ಹರಿಯಾಣ ಸರ್ಕಾರ ಸಮರ್ಥಿಸಿಕೊಂಡಿದೆ.

ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಮುಖ್ಯಸ್ಥನಿಗೆ ಜನವರಿ 20 ರಂದು 40 ದಿನಗಳ ಪೆರೋಲ್ ನೀಡಲಾಗಿದೆ. ಎರಡು ಕೊಲೆ ಪ್ರಕರಣಗಳಲ್ಲೂ ರಾಮ್ ರಹೀಮ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.

ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ(ಎಸ್ಜಿಪಿಸಿ) ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಪೆರೋಲ್ ಆದೇಶವನ್ನು ಪ್ರಶ್ನಿಸಿದೆ. ಎರಡು ಕೊಲೆ ಪ್ರಕರಣಗಳಲ್ಲಿ ರಾಮ್ ರಹೀಮ್ ಸಿಂಗ್ ಗೆ ಶಿಕ್ಷೆ ಆಗಿರುವುದರಿಂದ ಅವರು “ಸರಣಿ ಹಂತಕ” ಎಂದು ವಾದಿಸಿದೆ.

ಎಸ್ಜಿಪಿಸಿ ವಾದವನ್ನು ತಳ್ಳಿಹಾಕಿದ ರಾಜ್ಯ ಸರ್ಕಾರ, ಎರಡು ವಿಭಿನ್ನ ಕೊಲೆ ಪ್ರಕರಣಗಳಲ್ಲಿ ರಾಮ್ ರಹೀಮ್ ಸಿಂಗ್ ಅವರಿಗೆ ಶಿಕ್ಷೆಯಾಗಿದ್ದು, ಇದನ್ನು ಸರಣಿ ಕೊಲೆ ಎಂದು ಕರೆಯಲಾಗುವುದಿಲ್ಲ. ಏಕೆಂದರೆ ಅವರು ನೇರವಾಗಿ ಕೊಲೆ ಮಾಡಿಲ್ಲ ಎಂದು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!