Friday, March 1, 2024

ಮೋದಿಯಿಂದಾಗಿ ರಾಮ ಮರಳಿ ಮನೆಗೆ ಬಂದಿದ್ದಾನೆ: ಮೋಹನ್​ ಭಾಗವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭದ ನಂತರ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ಹಂತದಲ್ಲಿ ಪ್ರಧಾನಿ ಮೋದಿ ಒಬ್ಬ ತಪಸ್ವಿ ಎಂದು ಹೊಗಳಿದ ಅವರು, ಇಂದು ನವ ಭಾರತದ ಉದಯವಾಗಿದೆ ಎಂದರು.

ಇಂದು ರಾಮ ಅಯೋಧ್ಯೆಗೆ ಬಂದಾಗ ನಿಜವಾದ ಭಾರತದ ಚೈತನ್ಯ ಮರಳಿದೆ. ತುರ್ತು ಪರಿಸ್ಥಿತಿಯಲ್ಲಿ ಇಡೀ ವಿಶ್ವಕ್ಕೆ ನೆರವು ನೀಡಲು ಭಾರತ ಸಿದ್ಧವಾಗಿದೆ. ಇಲ್ಲಿಗೆ ಬರುವ ಮುನ್ನ ಪ್ರಧಾನಿ ಕಟ್ಟುನಿಟ್ಟಿನ ಉಪವಾಸ ಆಚರಿಸಿದ್ದು ಗೊತ್ತೇ ಇದೆ. ಅದು ಕಠಿಣಾತಿಕಠಿಣ ತಪಸ್ಸಾಗಿತ್ತು. ನಾನು ಮೋದಿಯವರೊಂದಿಗೆ ಹಲವು ವರ್ಷಗಳಿಂದ ಸಂವಹನ ನಡೆಸುತ್ತಿದ್ದೇನೆ. ಅವರು ಮಹಾನ್ ತಪಸ್ವಿ. ಎಲ್ಲದಕ್ಕೂ ಅವರೇ ಕಾರಣ. ಆದಾಗ್ಯೂ, ಅವರು ಏಕಾಂಗಿಯಾಗಿ ತಪಸ್ಸು ಮಾಡಿದರೆ ಸಾಲದು. ನಾವೆಲ್ಲರೂ ಕೈಲಾದಷ್ಟು ಕೆಲಸ ಮಾಡಬೇಕು ಎಂದು ಭಾಗವತ್​ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!