ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯ ನಡೆಯಲಿದ್ದು, ಈಗಾಗಲೇ ಎಲ್ಲ ಸಿದ್ಧತೆಗಳು ನಡೆದಿವೆ.
ರಾಮರಾಜ್ಯದ ನಿರ್ಮಾಣ ನಮ್ಮ ಕನಸು, ಅದನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೊಳಿಸಿದ ಐದು ಗ್ಯಾರೆಂಟಿಗಳು ಯಶಸ್ವಿಯಾಗಿವೆ. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಶ್ ಮಾಡುವುದರಲ್ಲೂ ರಾಜಕೀಯ ಮಾಡಿದ್ದೀರಿ, ರಜೆ ನೀಡದೇ ಅನ್ಯಾಯ ಮಾಡಿದ್ದೀರಿ ಎಂದು ನೆಟ್ಟಿಗರು ದೂಷಿಸಿದ್ದಾರೆ. ಕೆಲವರು ಪಾಲಿಟಿಕ್ಸ್ ಬಿಟ್ಟು ಶುಭಾಶಯ ತಿಳಿಸಿದ್ದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.