ಕಾರ್ಯಕ್ರಮಕ್ಕೆ ಏಳು ಸಾವಿರ ಗಣ್ಯರು, ‘ಎ’ ಲಿಸ್ಟ್‌ನಲ್ಲಿದ್ದಾರೆ 506 ಮಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಅದ್ಧೂರಿಯಾಗಿ ನಡೆಯುತ್ತಿರುವ ರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಬರೋಬ್ಬರು ಏಳು ಸಾವಿರ ಗಣ್ಯರು ಆಗಮಿಸಲಿದ್ದಾರೆ.

ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಏಳು ಸಾವಿರ ಗಣ್ಯರ ಪೈಕಿ 506 ಮಂದಿ ಎ ಲಿಸ್ಟ್‌ನಲ್ಲಿದ್ದಾರೆ. ಈಗಾಗಲೇ ಬಹುತೇಕ ಗಣ್ಯರು ಅಯೋಧ್ಯೆ ತಲುಪಿದ್ದಾರೆ, ಕೆಲವರು ನಿನ್ನೆಯೇ ಅಯೋಧ್ಯೆ ತಲುಪಿ, ದೇಗುಲವನ್ನು ನೋಡಿ ಖುಷಿಪಟ್ಟಿದ್ದಾರೆ.

ಅಮಿತಾಭ್ ಬಚ್ಚನ್, ಮುಖೇಶ್ ಅಂಬಾನಿ, ಸಚಿನ್ ತೆಂಡೂಲ್ಕರ್, ಗೌತಮ್ ಅದಾನಿ ಇನ್ನಿತರರು ಎ ಲಿಸ್ಟ್‌ನಲ್ಲಿದ್ದಾರೆ. ಒಂದೇ ಸೂರಿನಡಿ 700 ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ಕಾರಣ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!