ಹೊಸದಿಗಂತ ಡಿಜಿಟಲ್ ಡೆಸ್ಕ್:
ರಂಜಾನ್ ಹಬ್ಬದ ಪ್ರಾರ್ಥನೆ ಸಲ್ಲಿಸುವ ಹಿನ್ನಲೆ ಬೆಂಗಳೂರಿನ ನಾಗವಾರ ಜಂಕ್ಷನ್ನಿಂದ ಪಾಟರಿ ಸರ್ಕಲ್ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸೋಮವಾರ ಬೆಳಗ್ಗೆ 05.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆಯವರೆಗೆ ಪಾಟರಿ ಸರ್ಕಲ್ವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ಬೆಂಗಳೂರು ಸಂಚಾರಿ ಟ್ರಾಫಿಕ್ ಪೊಲೀಸರು ನಿಷೇಧಿಸಿದ್ದಾರೆ.
ಜೊತೆಗೆ ಪಾಟರಿ ಸರ್ಕಲ್ನಿಂದ ನಾಗವಾರ ಜಂಕ್ಷನ್ವರೆಗೆ ಎಲ್ಲಾ ಮಾದರಿಯ ವಾಹನಗಳ ಪಾರ್ಕಿಂಗ್ ಅನ್ನು ನಿಷೇಧಿಸಿದ್ದು, ಈದ್ಗಾ ಮೈದಾನ ಹಾಗೂ ಬಿಲಾಲ್ ಮಾಸ್ಕ್ ಹತ್ತಿರ ಪ್ರಾರ್ಥನೆ ಸಲ್ಲಿಸುವವರು ಅಲ್ಬನ್ಸ್ ಸ್ಕೂಲ್ ಕ್ರಾಸ್ ರಸ್ತೆಯಲ್ಲಿ ಹಾಗೂ ಪಿಲ್ಲಣ್ಣ ಗಾರ್ಡನ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ.