ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಇಂದು ಸೋಮವಾರ ಮುಸಲ್ಮಾನರ ಪವಿತ್ರ ಹಬ್ಬರಂಜಾನ್ ಆಚರಿಸಲಾಗುತ್ತಿದ್ದು, ಬೆಳಗ್ಗೆಯಿಂದಲೇ ಪ್ರಾರ್ಥನೆ ಆರಂಭವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ಬೆಳಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವುದು ಕಂಡುಬಂತು. ನಿನ್ನೆ ದೇಶದ ಪ್ರಮುಖ ನಗರಗಳಲ್ಲಿ ಈದ್-ಉಲ್-ಫಿತರ್ ಚಂದ್ರನನ್ನು ನೋಡಿದ ನಂತರ ಇಂದು ಹಬ್ಬ ಆಚರಿಸಲಾಗುತ್ತಿದೆ.
ರಂಜಾನ್ ತಿಂಗಳ ಉಪವಾಸ ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗಿದೆ. 30 ದಿನಗಳ ಉಪವಾಸದ ನಂತರ, ಶವ್ವಾಲ್ ಪ್ರಾರಂಭವಾಗಿದೆ. ಇದು ರಂಜಾನ್ ಅಂತ್ಯದ ನಂತರ ಬರುವ ಇಸ್ಲಾಮಿಕ್ ಕ್ಯಾಲೆಂಡರ್‌ನ 10ನೇ ತಿಂಗಳು. ದೇಶದ ಹಲವು ಜಿಲ್ಲೆಗಳಲ್ಲಿ ಇಂದು ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಮುಸಲ್ಮಾನರು ಎಡಗೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.