ಅಪರಾಧ ಕೃತ್ಯದಲ್ಲಿ ಭಾಗವಹಿಸುದಿಲ್ಲ ಎಂದು ಬಾಂಡ್ ಬರೆದುಕೊಟ್ಟ ರೌಡಿಗಳು: ಆಯುಕ್ತ ರಮನ್ ಗುಪ್ತಾ

ಹೊಸದಿಗಂತ ವರದಿ , ಹುಬ್ಬಳ್ಳಿ:

ಅವಳಿನಗರದ ರೌಡಿಗಳು ಅಪರಾಧ ಕೃತ್ಯದಲ್ಲಿ ಭಾಗವಹಿಸುದಿಲ್ಲ ಎಂದು ಬಾಂಡ್ ಬರೆದುಕೊಟ್ಟಿದ್ದು, ಆದರೂ ಅಂತಹ ಕೃತ್ಯದಲ್ಲಿ ಭಾಗವಹಿಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಇದಕ್ಕೂ ಮಣಿಯದಿದ್ದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಗಡಿಪಾರಿಗೆ ಮುಂದಾಗುತ್ತೇವೆ ಎಂದು ನೂತನ್ ಪೊಲೀಸ್ ಆಯುಕ್ತ ರಮನ್ ಗುಪ್ತಾ ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾಕೆ ಅಪರಾಧಗಳು ಜಾಸ್ತಿಯಾಗುತ್ತಿವೆ ಎಂದು ಆಯಾ ಠಾಣಾ ಪೊಲೀಸ್ ಅಕಾರಿಯಿಂದ ಮಾಹಿತಿ ಪಡೆದು ಪ್ರಕರಣದ ಹಿನ್ನೆಲೆ ಚರ್ಚೆ ನಡೆಸಲಾಗುತ್ತದೆ. ಬರುವ ದಿನಗಳಲ್ಲಿ ಅಪರಾಧದಲ್ಲಿ ಭಾಗವಹಿಸುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತಂತ್ರಜ್ಞಾನ ಆಧಾರಿತ ತನಿಖೆ: ನಗರದಲ್ಲಿ ಅಪರಾಧ ತಡೆಗೆ ಹಾಗೂ ಸೂಕ್ತ ತನಿಖೆ ನಡೆಸಲು ತಂತ್ರಜ್ಞಾನ ಅವಶ್ಯವಾಗಿದೆ. ಬೆರಳಚ್ಚು ಯಂತ್ರ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ವಿಡಿಯೋ, ಫೋಟೋ ಹಾಗೂ ಸಾಮಾಜಿಕ ಜಾಲತಾಣ ಸೂಕ್ತವಾಗಿ ಬಳಿಸಿಕೊಂಡು ಅಪರಾಗಳನ್ನು ಸೆರೆಹಿಡಿಯಲಾಗುತ್ತದೆ. ಇದರಿಂದ ಅತ್ಯಂತ ತ್ವರಿತವಾಗಿ ತನಿಖೆ ಪೂರ್ಣಗೊಳಿಸಬಹುದು ಎಂದು ತಿಳಿಸಿದರು.

ಜನ ಸ್ನೇಹಿಗೊಳಿಸುವುದು: ಇನ್ನೂ ಮುಂದೆ ಅವಳಿನಗರ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಲಿವೆ. ಠಾಣೆಗೆ ಬರುವವರ ಸಮಸ್ಯೆ ಆಲಿಸಿ, ತಕ್ಷಣ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಮೇಲಕಾರಿ ಇಲ್ಲ ಎಂದು ನೆಪ ಹೇಳದೆ, ಪ್ರಸ್ತುತ ಅಲ್ಲಿರುವ ಅಕಾರಿ ಪ್ರಕರಣ ದಾಖಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಾಯಿಸುವುದಕ್ಕೆ, ಅಲೆದಾಡಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!