ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣಪ್ರತಿಷ್ಟಗೆ ದಿನಗಳನೆ ಆರಂಭವಾಗುತ್ತಿದ್ದಂತೆಯೇ ಅಯೋಧ್ಯೆಗೆ ಅಯೋಧ್ಯೆಯೇ ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತಿದೆ.
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಸಕಲ ಏರ್ಪಾಡುಗಳಲ್ಲಿ ಬಿಝಿಯಾಗಿದ್ದು, ಹಗಲಿರುಳೆನ್ನದೆ ಕೆಲಸ ಕಾರ್ಯಗಳು ಇಲ್ಲಿ ಸಾಗುತ್ತಿವೆ. ಇಲ್ಲಿನ ರಸ್ತೆಗಳ ಹೆಸರನ್ನು ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮಜನ್ಮಭೂಮಿ ಪಥ ಎಂದು ಬದಲಿಸಲಾಗಿದೆ. ಪ್ರತ ದೇವಳಗಳಲ್ಲಿಯೂ ಈಗ ಭಜನೆ ನಿತ್ಯ ನಿರಂತರವಾಗಿ ಕೇಳಿಬರುತ್ತಿದೆ.
ರಾಮಮಂದಿರಕ್ಕೆ ಕರೆತರುವ ಧರ್ಮಪಥ ರಸ್ತೆಯ ಉದ್ದಕ್ಕೂ ’ಸೂರ್ಯಸ್ತಂಭ’ ಅಳವಡಿಸಲಾಗುತ್ತಿದ್ದು, ಪ್ರತೀ ಕಂಬದ ಮೇಲೆ ಸೂರ್ಯನನ್ನೇ ಹೋಲುವ, ಬೆಳಗುವ ಆಕೃತಿಯನ್ನು ಅಳವಡಿಸಲಾಗುತ್ತಿದೆ. ಈ ಕಂಬಗಳಲ್ಲಿ ಗಧೆಯ ಅಚ್ಚು ಮೂಡಿಸಲಾಗಿದ್ದು, ಜೊತೆಗೆ ’ಜೈ ಶ್ರೀರಾಮ್’ ಎಂದೂ ಬರೆಯಲಾಗಿದೆ.
ಇನ್ನು ಇಲ್ಲಗೆ ಆಗಮಿಸುವ ಭಕ್ತರಿಗಾಗಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೂ ನಾಮಫಲಕ ಹಾಕಲು ಸಿದ್ಧತೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ