ಮಂಗಳೂರು ಸಹಿತ ಹಲವು ಏರ್‌ಪೋರ್ಟ್‌ಗಳಿಗೆ ಬಾಂಬ್ ಬೆದರಿಕೆ: ಎಲ್ಲೆಡೆ ಕಟ್ಟೆಚ್ಚರ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಯ ಕುರಿತು ಅಪರಿಚಿತ ಇಮೇಲ್ ಸಂದೇಶ ರವಣೆಯಾಗಿದೆ.
ಡಿ.26ರ ರಾತ್ರಿ 11.59 ಗಂಟೆಗೆ ಬೆದರಿಕೆಯ ಇ ಮೇಲ್ ಬಂದಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಒಂದು ವಿಮಾನದ ಒಳಗೆ ಸ್ಫೋಟಕಗಳಿವೆ. ಮಾತ್ರವಲ್ಲದೆ ವಿಮಾನನಿಲ್ದಾಣದಲ್ಲೂ ಸ್ಪೋಟಕ ಇಡಲಾಗಿದೆ. ಕೆಲವೇ ಸಮಯದಲ್ಲಿ ಅದು ಸ್ಫೋಟಗೊಳ್ಳಲಿದೆ. ನಿಮ್ಮನ್ನೆಲ್ಲ ಕೊಲ್ಲುತ್ತೇನೆ. ನಾವು ಭಯೋತ್ಪಾದಕ ಗುಂಪು ಎಂದು ಮೇಲ್ ನಲ್ಲಿ ಬೆದರಿಕೆ ನೀಡಲಾಗಿತ್ತು. ಈ ಸಂದೇಶವನ್ನು ನಿಲ್ದಾಣದ ಅಧಿಕಾರಿಗಳು ಗಮನಿಸಿ ನಿಲ್ದಾಣದಲ್ಲಿ ಹೆಚ್ಚಿನ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ವಿಮಾನ ನಿಲ್ದಾಣದ ಆವರಣದ ಹೊರಗೆ ಭದ್ರತೆಯನ್ನು ಹೆಚ್ಚುಗೊಳಿಸಿ ತಪಾಸಣೆ ಮಾಡಲಾಗಿದೆ. ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನುಅಳವಡಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ವಿಮಾನ ನಿಲ್ದಾಣಗಲ್ಲಿ ಅಲರ್ಟ್ ಇರುವಂತೆ ಸೂಚಿಸಲಾಗಿದೆ, ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!