ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಾಮಪುರಂ ಕಡಲತೀರದಲ್ಲಿ ಶುಕ್ರವಾರ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.
ಪೊಲೀಸರ ಪ್ರಕಾರ, ತೇಜ (21), ಮತ್ತು ಕಿಶೋರ್ (22) ಎಂಬ ಇಬ್ಬರು ಯುವಕರ ಶವಗಳನ್ನು ಪತ್ತೆ ಹಚ್ಚಲಾಗಿದ್ದು, ನಿತಿನ್ (22), ಮತ್ತು ಅಮುಲ್ ರಾಜು (23) ನಾಪತ್ತೆಯಾಗಿದ್ದಾರೆ.
“ಯುವಕರನ್ನು ಏಲೂರು ಜಿಲ್ಲೆಯ ಪೆಡವೇಗಿಗೆ ಸೇರಿದವರು ಎಂದು ಗುರುತಿಸಲಾಗಿದೆ. ಪೆಡವೇಗಿ ಗ್ರಾಮದ ನಾಲ್ವರು ಯುವಕರು ವಿಹಾರಕ್ಕೆಂದು ಬಾಪಟ್ಲಾ ಜಿಲ್ಲೆಯ ರಾಮಾಪುರದ ಬೀಚ್‌ಗೆ ತೆರಳಿದ್ದರು. ಸಮುದ್ರದಲ್ಲಿ ಸ್ನಾನ ಮಾಡುವಾಗ ನಾಲ್ವರು ನಾಪತ್ತೆಯಾಗಿದ್ದಾರೆ. ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇನ್ನಿಬ್ಬರು ಇನ್ನೂ ಪತ್ತೆಯಾಗಿಲ್ಲ ಎಂದು ಚಿರಾಲ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಸಾದ್ ತಿಳಿಸಿದ್ದಾರೆ.