August 31, 2026
Monday, August 31, 2026
spot_img

ನಾಳೆ ರಿಲೀಸ್ ಆಗಬೇಕಿದ್ದ ‘ರಾಮಾಯಣ’ ಟ್ರೈಲರ್ ಲೀಕ್: ಕಣ್ಮನ ಸೆಳೆಯುತ್ತಿದೆ ರಾವಣನ ದೃಶ್ಯಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣ್​​ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ದ ವೈರಲ್ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ನಾಳೆ ಜುಲೈ 30ರಂದು ಚಿತ್ರತಂಡ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಲು ಯೋಜನೆ ರೂಪಿಸಿತ್ತು. ಆದರೆ, ಸ್ಯಾಂಡಿಯಾಗೋ ಕಾಮಿಕಾನ್‌ ಪ್ರದರ್ಶನದಲ್ಲಿ ಅನಾವರಣಗೊಂಡ ಈ ಝಲಕ್, ಅದಕ್ಕೂ ಮುನ್ನವೇ ಲೀಕ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

ರಾವಣನಾಗಿ ಕೆಜಿಎಫ್‌ ರಾಕಿ ಭಾಯ್ ಅಬ್ಬರ!

ಕಡಿಮೆ ಗುಣಮಟ್ಟದ ವಿಡಿಯೋ ಲೀಕ್ ಆಗಿದ್ದರೂ ಸಹ, ಯಶ್ ಅವರ ರಾವಣನ ಪಾತ್ರದ ಮಾಸ್‌ ಎಂಟ್ರಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ. ವಿಶೇಷವಾಗಿ, ತಮ್ಮ ಗಂಭೀರ ದ್ವನಿ ಹಾಗೂ ಆವೇಶದಿಂದ ಘರ್ಜಿಸುವ ಸಿಂಹವನ್ನೇ ಸುಮ್ಮನಾಗಿಸುವ ಸೀನ್‌ ಹಾಗೂ ಕೈ ಚಾಚಿ ಡೈಲಾಗ್‌ ಹೊಡೆಯುವ ಅದ್ಧೂರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ.

ಹಲವು ಪೌರಾಣಿಕ ದೃಶ್ಯಗಳ ಸಮ್ಮಿಲನ

ಈ ವಿಶೇಷ ಟ್ರೈಲರ್‌ನಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಮಿಂಚಿದ್ದಾರೆ. ಸೀತಾ ಕಲ್ಯಾಣ, ಪ್ರಭು ಶ್ರೀರಾಮನ ವನವಾಸ, ಶೂರ್ಪನಖಿಯ ಮೂಗು ಕತ್ತರಿಸುವ ಪ್ರಸಂಗ, ಹನುಮಂತನ ಪ್ರವೇಶ ಹಾಗೂ ದಶರಥ ಮಹಾರಾಜನ ಭಾವನಾತ್ಮಕ ಸನ್ನಿವೇಶಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !