ಟ್ರಂಪ್ ಸುಂಕ ನೀತಿ ವಿರುದ್ಧ ರಾಮದೇವ್ ಕಿಡಿ: ತೆರಿಗೆ ಭಯೋತ್ಪಾದನೆ ವಿರುದ್ಧ ಭಾರತೀಯರು ಒಗ್ಗಟ್ಟಾಗಲು ಕರೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಮದು ಸುಂಕ ಏರಿಸುವುದಾಗಿ ಹೇಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಯೋಗ ಗುರು ಬಾಬಾ ರಾಮದೇವ್ ಕಿಡಿ ಕಾರಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ನೀತಿಯನ್ನು ತೆರಿಗೆ ಭಯೋತ್ಪಾದನೆ (Tariff Terrorism) ಎಂದು ಗುಡುಗಿದ ರಾಮದೇವ್, ಟ್ರಂಪ್ ಟ್ಯಾರಿಫ್ ಟೆರರಿಸಂನಲ್ಲಿ ಹೊಸ ವಿಶ್ವದಾಖಲೆಯನ್ನೇ ಮಾಡಿದ್ದಾರೆ. ಬಡ ಹಾಗೂ ಅಭಿವೃದ್ಧಿಶೀಲ ದೇಶಗಳನ್ನು ಬೆದರಿಸುವ ಮೂಲಕ ಪ್ರಜಾತಂತ್ರವನ್ನೇ ಹಾಳುಗೆಡವಿದ್ದಾರೆ. ಭಾರತೀಯರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ.

ಪ್ರಬಲ ರಾಷ್ಟ್ರ ನಿರ್ಮಾಣಕ್ಕೆ ಎಲ್ಲಾ ಭಾರತೀಯರು ಒಗ್ಗಟ್ಟಾಗಿ, ಈ ವಿನಾಶಕಾರಿ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕು’ ಎಂದು ಯೋಗ ಗುರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!