September 27, 2026
Sunday, September 27, 2026
spot_img

ರಾಮೆನ್‌ ಕೊರಿಯಾದಾಗಿರಬಹುದು ಆದರೆ ನಮ್ಮ ಇಂಡಿಯನ್‌ ಸ್ಟೈಲ್‌ನಲ್ಲಿ ಮಾಡಿದ್ರೆ ಹೇಗಿರತ್ತೆ ಗೊತ್ತಾ?

ಸಾಮಾಗ್ರಿಗಳು

ಕೊರಿಯನ್‌ ನೂಡಲ್ಸ್‌
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಸೊಪ್ಪು
ಖಾರದಪುಡಿ
ಗರಂ ಮಸಾಲಾ
ಇಷ್ಟದ ತರಕಾರಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ, ಜೊತೆಗೆ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ಬೆಂದ ನಂತರ ಸ್ವಲ್ಪ ಅರಿಶಿಣ ಹಾಕಿ, ಉಪ್ಪು ಹಾಕಿ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ
ಆನಂತರ ತರಕಾರಿಗಳು ಸ್ವಲ್ಪ ಬೆಂದ ಮೇಲೆ ಖಾರದಪುಡಿ, ಗರಂ ಮಸಾಲಾ ಹಾಕಿ
ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ ಅಳತೆಗೆ ತಕ್ಕಷ್ಟು ನೀರು ಹಾಕಿ
ಆನಂತರ ನೂಡಲ್ಸ್‌ ಹಾಕಿ, ಟೇಸ್ಟ್‌ ಮೇಕರ್‌ ಹಾಕಿ
ಕಡೆಗೆ ತಟ್ಟೆ ಮುಚ್ಚಿ ಹತ್ತು ನಿಮಿಷ ಬೇಯಿಸಿದ್ರೆ ನೂಡಲ್ಸ್‌ ರೆಡಿ. ಇದನ್ನು ಸೂಪಿ ಅಥವಾ ಡ್ರೈ ಆಗಿ ತಿನ್ನೋದು ನಿಮ್ಮಿಷ್ಟಕ್ಕೆ ಬಿಟ್ಟಿದ್ದು.

Must Read