ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕ ಬಸನಗೌಡ ಪಾಟೀಲ್ ಈಗಲೂ ನಮ್ಮ ಟೀಮ್‌ನಲ್ಲೆ ಇದ್ದಾರೆ. ಯತ್ನಾಳ್ ಮಾತಿನ ಬರದಲ್ಲಿ ಏನೇನೂ ಮಾತನಾಡುತ್ತಾರೆ. ಯಾರಿಗೂ ಕೆಟ್ಟದ್ದು ಬಯಸುವ ಗುಣ ಯತ್ನಾಳ್‌ಗಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಯಾರನ್ನೂ ಬೈಬೇಡಾ, ಪಕ್ಷಕ್ಕೆ ಮುಜುಗುರ ಆಗದಂತೆ ಮಾಡಬೇಡಾ ಎಂದು ಯತ್ನಾಳಗೆ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಯತ್ನಾಳ್ ಸ್ಪಂದಿಸುತ್ತಾರೆ ಎಂಬ ವಿಶ್ವಾಸ ನನ್ನದು, ನೇರವಾಗಿ ಮಾತನಾಡುವುದು ಯತ್ನಾಳ್ ಅವರ ಹುಟ್ಟು ಗುಣ, ಕೆಲವೊಂದು ಸಲ ಮಾತನಾಡುತ್ತಾರೆ. ಅವರು ಮಾತನಾಡುವುದೇ ಬೇರೆ, ಈ ಮಧ್ಯೆಯ ಇದು ಬೇರೆ ಟ್ವಿಸ್ಟ್ ಆಗಿ ಬಿಡುತ್ತಿದೆ ಎಂದರು.
ಯತ್ನಾಳ ಬೇರೆ ಪಕ್ಷ ಕಟ್ಟುತ್ತಾರೆ ಎಂಬ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬೇರೆ ಪಕ್ಷ ಏನಿಲ್ಲ, ಯತ್ನಾಳ ಬಿಜೆಪಿ ನಾಯಕರನ್ನು ಬೈತಿಲ್ಲ ಒಂದೇ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಸಂಘಟನೆ ಮಾಡು ಅದನ್ನ ಬಿಟ್ಟು ಬೇರೆ ವಿಚಾರ ಮಾತನಾಡಬೇಡ ಎಂದು ಮನವಿ ಮಾಡಿದ್ದೇನೆ. ಯತ್ನಾಳರನ್ನು ನಾವು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡ್ತಿದ್ದೇವೆ ಎಂದರು.