ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಕಿಸ್ಸಿಂಗ್ ಫೋಟೊ ವೈರಲ್ ಆಗುತ್ತಲೇ, ನರೇಶ್ ಮಾಜಿ ಪತ್ನಿ ರಮ್ಯಾ ಗಂಡನಿಗೆ ವಿಚ್ಛೇದನ ನೀಡೋದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.
ಇದೀಗ ನರೇಶ್ ರಮ್ಯಾ ಮೇಲೆ ಮತ್ತೊಂದು ಆರೋಪ ಮಾಡಿದ್ದು, ವಿಚ್ಛೇದನ ಪಡೆಯೋದಕ್ಕೆ ರಮ್ಯಾ 10 ಕೋಟಿ ರೂಪಾಯಿ ಕೇಳ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಗನಿಗಾಗಿ ವಿಚ್ಛೇದನ ನೀಡೋದಿಲ್ಲ ಎಂದಿದ್ದ ರಮ್ಯಾ ಇದೀಗ ಸೆಟಲ್‌ಮೆಂಟ್‌ಗಾಗಿ ಭಾರೀ ಮೊತ್ತ ಕೇಳಿದ್ದಾರೆ ಎಂದು ನರೇಶ್ ಹೇಳಿಕೊಂಡಿದ್ದಾರೆ. ದುಡ್ಡಿಗಾಗಿ ಎಲ್ಲ ರಾದ್ಧಾಂತ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.