ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ವರ್ಷಗಳ ನಂತರ ಚಿತ್ರರಂಗಕ್ಕೆ ರಮ್ಯಾ ಮತ್ತೆ ಕಾಲಿಟ್ಟಿದ್ದಾರೆ. ನಟನೆ ಜೊತೆಗೆ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದು, ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಮತ್ತೆ ಬಣ್ಣ ಹಚ್ಚಿದ್ದಾರೆ.
ಇಂದು ರಮ್ಯಾ 40 ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನಕ್ಕೆಂದು ರಮ್ಯಾ ಈಗಾಗಲೇ ಜಪಾನ್ಗೆ ತೆರಳಿದ್ದು, ಜಪಾನ್ನಲ್ಲಿ ಉಳಿದಿರುವ ಹೊಟೇಲ್ ರೂಂ ಫೋಟೊ ಒಂದನ್ನು ಅಪ್ಲೋಡ್ ಮಾಡಿದ್ದಾರೆ.
ಹೊಟೇಲ್ ರೂಂ ಗಮನಿಸಿ, ರಮ್ಯಾ ಜಪಾನ್ಗೆ ತೆರಳಿರುವ ಸುದ್ದಿ ತಿಳಿದಿದೆ. ಜನ್ಮದಿನ ಸಂಭ್ರಮಕ್ಕೆ ರಮ್ಯಾ ವಿದೇಶಕ್ಕೆ ಹಾರಿದ್ದು, ಇನ್ಸ್ಟಾಗ್ರಾಂನಲ್ಲಿ ಫೋಟೊ ಅಪ್ಲೋಡ್ ಮಾಡಿದ್ದಾರೆ. ಜನ್ಮದಿನಕ್ಕೆ ರಮ್ಯಾ ಮುಂದಿನ ಸಿನಿಮಾ ಲುಕ್ ರಿಲೀಸ್ ಆಗಬಹುದಾ ಎಂದು ಜನ ನಿರೀಕ್ಷಿಸಿದ್ದಾರೆ.