ಸ್ಯಾಂಡಲ್‌ವುಡ್‌ ಗೆ ಮತ್ತೆ ರಮ್ಯಾ ಕಂಬ್ಯಾಕ್: ಮುಹೂರ್ತವೂ ಆಯಿತು, ಟೈಟಲ್ ಹೊರಬಿತ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್‌ವುಡ್‌ನ ನಟ ಧನಂಜಯ್​ ಅಭಿನಯದ ‘ಉತ್ತರಕಾಂಡ’ ಚಿತ್ರದಲ್ಲಿ ನಾಯಕಿಯಾಗಿ ಮೋಹಕ ತಾರೆ ರಮ್ಯಾ ನಟಿಸುತ್ತಾರೆ ಎಂಬ ಸುದ್ದಿ ನಿಜವಾಗಿದೆ.

ನಾಗರಹಾವು ಚಿತ್ರದ ನಂತರ ನಟನೆಯಿಂದ ದೂರ ಸರಿದಿದ್ದ ರಮ್ಯಾ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು. ಆ ಪ್ರಶ್ನೆಗೆ ಉತ್ತರ ನೀಡಿದ ರಮ್ಯಾ ಇತ್ತೀಚಿಗಷ್ಟೆ ಆಯಪಲ್ ಬಾಕ್ಸ್ ಎಂಬ ತಮ್ಮ ಒಡೆತನದ ಪ್ರೊಡಕ್ಷನ್ ಕಂಪನಿಯನ್ನು ಸಹ ಘೋಷಣೆ ಮಾಡಿ ಅದರಡಿಯಲ್ಲಿ ನಿರ್ಮಾಣವಾಗಲಿರುವ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದಲ್ಲಿ ತಾವೇ ನಟಿಸುವುದಾಗಿ ಹೇಳಿದ್ದರು. ಆದರೆ ಈ ಚಿತ್ರದಿಂದ ರಮ್ಯಾ ಹೊರ ನಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು.

ಆದರೀಗ ರಮ್ಯಾ ಡಾಲಿ ಧನಂಜಯ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸುತ್ತಿರುವ ಸುದ್ದಿ ಹೊರಬಿದ್ದಿದ್ದು, ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.

ನಟ ಧನಂಜಯ್ ಅಭಿನಯದ ‘ಉತ್ತರಕಾಂಡ’ ಎಂಬ ಚಿತ್ರದಲ್ಲಿ ರಮ್ಯಾ ನಟಿಯಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಇಂದು ನಡೆದ ಚಿತ್ರದ ಮುಹೂರ್ತ ಸಮಾರಂಭದ ಮೂಲಕ ರಮ್ಯಾನೇ ಈ ಚಿತ್ರದ ನಾಯಕಿ ಎಂಬುದು ರಿವೀಲ್ ಆಗಿದೆ. ನಟಿ ರಮ್ಯಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಫೋಟೋಗಳು ವೈರಲ್ ಆಗಿವೆ, ಚಿತ್ರದ ಪೋಸ್ಟರ್‌ನಲ್ಲೂ ಸಹ ಧನಂಜಯ್ ಹಾಗೂ ರಮ್ಯಾ ಇಬ್ಬರ ಹೆಸರಿದೆ.

ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶನ ಮಾಡಿದ್ದ ರೋಹಿತ್ ಪದಕಿ ನಿರ್ದೇಶನವಿದ್ದು, ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಂಡವಾಳ ಹೂಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!