ಹೊಸದಿಗಂತ ಡಿಜಿಟಲ್ ಡೆಸ್ಕ್
ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಜೂನ್ 6 ರಿಂದ ಪ್ರಾರಂಭವಾಗುವ ಉತ್ತರ ಪ್ರದೇಶದೊಂದಿಗಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಟೈಗಾಗಿ ಕರ್ನಾಟಕ 20 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.
ಆದರೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಕಾರಣ ದೇಸೀ ಕ್ರಿಕೆಟ್ ದೈತ್ಯರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಸೇವೆಯನ್ನು ರಾಜ್ಯತಂಡವು ಕಳೆದುಕೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟಿ20ಐ ಸರಣಿಯಲ್ಲಿ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ಗೆ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಏತನ್ಮಧ್ಯೆ, ಕರ್ನಾಟಕದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲು ವಿ ಕೌಶಿಕ್ ಅವರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. 2019-20ರ ಋತುವಿನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ 29 ವರ್ಷದ ಆಟಗಾರ ಕೌಶಿಕ್, 39 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜೆ ಸುಚಿತ್ ಮತ್ತು ಕೆಸಿ ಕಾರಿಯಪ್ಪ ಅವರಿರುವ ಸ್ಪಿನ್ ವಿಭಾಗ ಅತ್ಯಂತ ಬಲಿಷ್ಠವಾಗಿ ಕಾಣುತ್ತದೆ. ತಂಡ ಬ್ಯಾಟಿಂಗ್ ವಿಭಾಗದಲ್ಲಿ ಅತ್ಯಂತ ಸದೃಢವಾಗಿದೆ. ಮಯಾಂಕ್ ಅಗರ್ವಾಲ್, ನಾಯಕ ಮನೀಶ್ ಪಾಂಡೆ, ಆರ್ ಸಮರ್ಥ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್ ಅವರಿರುವ ಬ್ಯಾಟಿಂಗ್ ವಿಭಾಗ ಟೂರ್ನಿಯಲ್ಲೇ ಶ್ರೇಷ್ಟ ಬ್ಯಾಟಿಂಗ್ ವಿಭಾಗ ಎಂದು ಗುರುತಿಸಿಕೊಂಡಿದೆ.
ಕರ್ನಾಟಕ ತಂಡ:
ಮನೀಶ್ ಪಾಂಡೆ (ಸಿ), ಸಮರ್ಥ್ ಆರ್ (ವಿಸಿ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸಿದ್ಧಾರ್ಥ್ ಕೆವಿ, ನಿಶ್ಚಲ್ ಡಿ, ಶರತ್ ಶ್ರೀನಿವಾಸ್ (ಡಬ್ಲ್ಯುಕೆ), ಶರತ್ ಬಿ ಆರ್ (ಡಬ್ಲ್ಯುಕೆ), ಶ್ರೇಯಸ್ ಗೋಪಾಲ್, ಗೌತಮ್ ಕೆ, ಶುಭಾಂಗ್ ಹೆಗ್ಡೆ , ಸುಚಿತ್ ಜೆ, ಕರಿಯಪ್ಪ ಕೆಸಿ, ರೋನಿತ್ ಮೋರೆ, ಕೌಶಿಕ್ ವಿ, ವೈಶಾಕ್ ವಿಜಯ್ಕುಮಾರ್, ವೆಂಕಟೇಶ್ ಎಂ, ವಿದ್ವತ್ ಕಾವೇರಪ್ಪ, ಕಿಶನ್ ಎಸ್. ಬೇಡರೆ.