ರನ್ಯಾ ರಾವ್ ಪ್ರಕರಣ ಸಿಬಿಐ ತನಿಖೆಗೆ ಕೊಡಬೇಕು: ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯ

ದಿಗಂತ ವರದಿ ವಿಜಯಪುರ:

ರನ್ಯಾ ರಾವ್ ಪ್ರಕರಣವೊಂದು ದೊಡ್ಡ ಜಾಲವಿದ್ದು, ಇದು ಸಿಬಿಐ ತನಿಖೆಗೆ ಕೊಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಇದರಲ್ಲಿ ರಾಜಕಾರಣಿಗಳು, ಮಂತ್ರಿಗಳು, ಪೋಲಿಸ್ ಅಧಿಕಾರಿಗಳು ಇರಬಹುದು. ಆ ಹೆಣ್ಣುಮಗಳಿಗೆ ಪೋಲಿಸ್ ಸೆಕ್ಯೂರಿಟಿ ಕೊಡುತ್ತಿದ್ದರು. ಆ ಹೆಣ್ಣುಮಗಳಿಗೆ ಪ್ರೋಟೋಕಾಲ್ ಮೆಂಟೇನ್ ಮಾಡುತ್ತಿದ್ದರು, ಇದೊಂದು ದೊಡ್ಡ ಜಾಲ ಎಂದರು.

ಇದು ನಮ್ಮ ರಾಜ್ಯದ ಗೃಹ ಮಂತ್ರಿ, ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ. ಈ ಪ್ರಕರಣ ಸಿಬಿಐ ಗೆ ಕೊಟ್ಟರೆ ನ್ಯಾಯ ಸಿಗುತ್ತೆ. ಇದರಲ್ಲಿರುವ ರಾಜಕಾರಣಗಳಾಗಲೀ, ಅಧಿಕಾರಗಳಾಗಲಿ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.

ಬಂಗಾರ ಕಳ್ಳ ಸಾಗಾಣಿಕ ಮಾಡುವಂತದ್ದು, ಎಲ್ಲಿ ಬಂಗಾರ ಇಟ್ಟುಕೊಂಡು ತಂದಿದ್ದಾರೆ. ಮನುಷ್ಯನಿಗೆ ಎಲ್ಲೆಲ್ಲಿ ತೂತ ಇದ್ದಾವೋ ಅಲ್ಲಿ ಎಲ್ಲ ಕಡೆ ಬಂಗಾರ ಇಟ್ಟುಕೊಂಡು ಬಂದಿದ್ದಾರೆ. ಆ ತೂತುಗಳು ಬಂದ ಆಗಬೇಕು ಎಂದರೆ ಇದು ಸಿಬಿಐ ತನಿಖೆಗೆ ಕೊಡಬೇಕು ಎಂದರು.

ಅವರ ತಂದೆ ಹುದ್ದೆ ಅವರು ಬಳಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಸಚಿವರಿರಬಹುದು, ಉನ್ನತ ಪೋಲಿಸ್ ಅಧಿಕಾರಿಗಳಿರಬಹುದು, ಇದು ಸಿಬಿಐ ತನಿಖೆ ಆಗಬೇಕು. ರನ್ಯಾ ಗೆ ಇಷ್ಟೆಲ್ಲ ಸೆಕ್ಯೂರಿಟಿ ಯಾಕೆ ಕೊಟ್ಟರು ಎಂದರು.

ಈ ರನ್ಯಾ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ ಅಧಿಕಾರಿಗಳು ಸೇರಿದಂತೆ ಯಾರೇ ತಪ್ಪು ಮಾಡಿದ್ದರು ಕ್ರಮವಾಗಲಿ ಎಂದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!