ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯ ಹೊರವಲಯದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು.
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಆತನ ಮೃತದೇಹ ಇದ್ದು, ಯಾರೂ ತೆಗೆದುಕೊಂಡು ಹೋಗಲು ಬಂದಿಲ್ಲ ಎನ್ನಲಾಗಿದೆ. ಈ ಕಾರಣದಿಂದಾಗಿ ಪೊಲೀಸರು ಆತನ ಫೋಟೊ ರಿಲೀಸ್ ಮಾಡಿದ್ದಾರೆ. ಕುಟುಂಬದವರನ್ನು ಹುಡುಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಆರೋಪಿ ರಿತೇಶ ಪೊಲೀಸ್ ವಿಚಾರಣೆ ವೇಳೆ ತಾನು ಬಿಹಾರದ ಪಾಟ್ನಾ ನಿವಾಸಿ ಎಂದು ಹೇಳಿದ್ದ. ಆದರೆ ಇಲ್ಲಿಯವರೆಗೂ ಆತನ ಮನೆಯವರಿಗೆ ಸುದ್ದಿ ತಲುಪಿಸಲು ಆಗಿಲ್ಲ. ಕುಟುಂಬಸ್ಥರನ್ನು ಪತ್ತೆಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈತನ ಫೋಟೋ ಮತ್ತು ಕೃತ್ಯದ ಬಗ್ಗೆ ಬಿಹಾರ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನೆ ಮಾಡಲಾಗಿದೆ. ಅಲ್ಲಿಂದ ಏನಾದರೂ ಸುದ್ದಿ ಬರಬಹುದು ಎಂದು ಹುಬ್ಬಳ್ಳಿ ಪೊಲೀಸರು ಕಾಯುತ್ತಿದ್ದಾರೆ.
ಇದರ ಮಧ್ಯೆ ಪೊಲೀಸರ ಮತ್ತೊಂದು ತಂಡ ಬಿಹಾರದ ಪಾಟ್ನಾಗೆ ತೆರಳಿ ಆರೋಪಿಯ ವಿಳಾಸ ಪತ್ತೆ ನಡೆಸುತ್ತಿದೆ. ಇಲ್ಲಿಯೂ ಕೂಡ ಅಶೋಕನಗರ ಠಾಣೆ ಪೊಲೀಸರು ಆರೋಪಿ ಸ್ನೇಹಿತರು, ಪರಿಚಯಸ್ಥರನ್ನು ಗುರುತಿಸಿ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ.