ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ರಿಯಾಲಿಟಿ ಶೋ ತಾರೆ ಮತ್ತು ಮಾಡೆಲ್ ಶಿಯಾಸ್ ಕರೀಂ ಅವರನ್ನು ಚೆನ್ನೈ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಶಿಯಾಸ್ ಕರೀಂ ವಿರುದ್ಧ ಕೇರಳದಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. ಶಿಯಾಸ್ ಕರೀಂ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ 11 ಲಕ್ಷ ರೂ. ಸುಲಿಗೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ಅರೆಸ್ಟ್ ಮಾಡಿದ್ದಾರೆ.
ಶಿಯಾಸ್ ಕರೀಂ ವಿದೇಶದಿಂದ ಚೆನ್ನೈಗೆ ಬಂದಿದ್ದ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನನ್ನು ಚೆನ್ನೈ ಕಸ್ಟಮ್ಸ್ ಇಲಾಖೆ ವಶಕ್ಕೆ ಪಡೆದಿದ್ದು, ಕೇರಳ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಜಿಮ್ನಾಷಿಯಂ ತರಬೇತುದಾರರಾಗಿರುವ ಯುವತಿಯ ದೂರಿನ ಮೇರೆಗೆ ಕಾಸರಗೋಡು ಚಂದೇರಾ ಪೊಲೀಸರು ಶಿಯಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.