ಮಹಿಳೆಯಿಂದ ಅತ್ಯಾಚಾರ ದೂರು: ಆರೋಪ ನಿರಾಕರಿಸಿದ ಜಿಂದಾಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜೆಎಸ್‌ಡಬ್ಲ್ಯು ಸಮೂಹದ ಚೇರ್‌ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್‌ ಜಿಂದಾಲ್‌ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪದಡಿ ದೂರು ನೀಡಿದ್ದು, ಇಲ್ಲಿನ ಬಿಕೆಸಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮಹಿಳೆಯ ಆರೋಪವನ್ನು ಜಿಂದಾಲ್‌ ಅಲ್ಲಗಳೆದಿದ್ದಾರೆ.

ದೂರು ನೀಡಿರುವ ಮುಂಬೈನ 30 ವರ್ಷದ ಮಹಿಳೆ, ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ಜಿಂದಾಲ್ (64) ಅವರನ್ನು ಭೇಟಿಯಾಗಿದ್ದೆ. 2022ರ ಜನವರಿ 24 ರಂದು ಮುಂಬೈನ ಜೆಎಸ್‌ಡಬ್ಲ್ಯು ಸಮೂಹದ ಕೇಂದ್ರ ಕಚೇರಿಗೆ ಹೋಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ನನ್ನೊಂದಿಗೆ ಸ್ನೇಹ ಬೆಳೆಸಿದ್ದರು ಎಂದೂ ಹೇಳಿದ್ದಾರೆ.

ಫೆಬ್ರವರಿ 16 ರಂದು ಪೊಲೀಸರನ್ನು ಸಂಪರ್ಕಿಸಿದ್ದು, ಡಿಸೆಂಬರ್ 13 ರಂದು ಮುಂಬೈನ BKC ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಕೈಗಾರಿಕೋದ್ಯಮಿ ಜಿಂದಾಲ್ ಅವರು ಭಾನುವಾರ ಸಂಜೆ ಹೇಳಿಕೆ ನೀಡಿದ್ದು, ಆರೋಪಗಳು ಸುಳ್ಳು ಮತ್ತು ಆಧಾರರಹಿತ. ತನಿಖೆಯ ಉದ್ದಕ್ಕೂ ಸಂಪೂರ್ಣ ಸಹಕಾರ ನೀಡಲು ಬದ್ಧ. ತನಿಖೆ ನಡೆಯುತ್ತಿರುವುದರಿಂದ, ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ವಿನಂತಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!