ಖ್ಯಾತ ನಟಿ ಮೇಲೆ ಅತ್ಯಾಚಾರ: NRI ಉದ್ಯಮಿ ವಿರುದ್ಧ ದೂರು ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮದುವೆಯಾಗುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಖ್ಯಾತ ನಟಿ ಖುದ್ದು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು 41 ವರ್ಷದ NRI ಉದ್ಯಮಿ ವಿರೆನ್ ಪಟೇಲ್ ವಿರುದ್ಧ 34 ವರ್ಷದ ನಟಿ ಮುಂಬೈನ ಎನ್‌ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಮುಂಬೈನ ಖ್ಯಾತ ನಟಿ, ತಾಂಜೇನಿಯಾದಲ್ಲಿ ಉದ್ಯಮಿಯಾಗಿರುವ ಭಾರತೀಯ ಮೂಲದ ವಿರೆನ್ ಪಟೇಲ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕೆಲ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ನಟಿಗೆ ಇದೀಗ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ ಉದ್ಯಮಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಕುರಿತು ಸ್ವತಃ ನಟಿ ದೂರು ನೀಡಿದ್ದಾರೆ.

2022ರಲ್ಲಿ ಮುಂಬೈನ ಅಂಧೇರಿಯಲ್ಲಿ ನಡೆದ ಖಾಸಗಿ ಪಾರ್ಟಿಯೊಂದರಲ್ಲಿ ನಟಿ, ಉದ್ಯಮಿ ಭೇಟಿಯಾಗಿದ್ದಾರೆ. ಪರಿಚಯ ಕೆಲವೇ ದಿನಗಳಲ್ಲಿ ಆತ್ಮೀಯತೆ ಪಡೆದುಕೊಂಡಿದೆ. ಬಳಿಕ ಪ್ರೀತಿ ಶುರುವಾಗಿದೆ. ದಿಢೀರ್ ಕರೆ ಮಾಡಿ ತನ್ನ ಜೊತೆಗಿರಲು ನಟಿಯನ್ನು ಉದ್ಯಮಿ ಆಹ್ವಾನಿಸಿದ್ದಾನೆ. 2023ರ ಫೆಬ್ರವರಿ ತಿಂಗಳಲ್ಲಿ ಉದ್ಯಮಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾನೆ. ಖುಷಿಯಿಂದ ಒಪ್ಪಿಕೊಂಡ ನಟಿ ಪೋಷಕರು, ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾಹಿತಿ ನೀಡಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮಧ್ಯದ ಅಮಲಿನಲ್ಲಿ ಉದ್ಯಮಿ ಮಧ್ಯ ರಾತ್ರಿ ತನ್ನ ಕೋಣೆಗೆ ಆಗಮಿಸಿ ಸಹಾಯ ಕೇಳಿದ್ದಾನೆ. ಬಳಿಕ ಬಿಗಿದಪ್ಪಿಕೊಂಡಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಲ್ಲೆ ನಡೆಸಿದ್ದಾನೆ. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಗ್ಗೆ ನಾನು ಪೋಷಕರಿಗೆ ಮಾಹಿತಿ ನೀಡಿದ್ದೇನೆ. ಆದರೆ ಶೀಘ್ರದಲ್ಲೇ ಮದುವೆಯಾಗುವ ಕಾರಣ ಈ ವಿಚಾರವನ್ನು ಮುಂದಿಟ್ಟು ಸಂಬಂಧ ಹಾಳು ಮಾಡುವುದು ಬೇಡ ಎಂದು ಸುಮ್ಮನಾದೆವು. ಮುಂಬೈ, ಪುಣೆ, ಆಲಿಬಗ್ ಹಾಗೂ ಕರ್ಜತ್‌ನಲ್ಲಿ ಅತ್ಯಾಚಾರ ಎಸಗಲಾಗಿದೆ. ಮೊದಲ ಅತ್ಯಾಚಾರವನ್ನು ಮುಂದಿಟ್ಟು ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ.

ನಟಿ ಹಾಗೂ ನನಗೆ ಇಂಡಸ್ಟ್ರಿಯಲ್ಲಿ ಉತ್ತಮ ಹೆಸರಿದೆ. ಜೊತೆಗೆ ಈ ಅತ್ಯಾಚಾರ ವಿಚಾರ ಹೊರಬಂದರೆ ನನ್ನ ಕುಟುಂಬ, ನನ್ನ ಕರಿಯರ್ ಕೂಡ ಹಾಳಾಗಲಿದೆ. ಮದುವೆಯಾಗುವ ಭರವಸೆ ನೀಡಿದ ಕಾರಣ ಮತ್ತೆ ಸುಮ್ಮನಾದೆ. ಆದರೆ ಉದ್ಯಮಿಯ ಉಪಟಳ ಅತೀಯಾದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಈ ವೇಳ ಪೊಲೀಸರು ವಾರ್ನಿಂಗ್ ಕೂಡ ನೀಡಿದ್ದರು.ಈ ಬೆಳವಣಿಗೆ ಬಳಿಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಇತ್ತ ಮದುವೆಯಾಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಹೀಗಾಗಿ ನ್ಯಾಯ ಕೊಡಿಸಬೇಕು ಎಂದು ನಟಿ ದೂರು ನೀಡಿದ್ದಾರೆ.

ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!