ಉತ್ತರ ಪ್ರದೇಶದಲ್ಲಿ ದಲಿತ ಸಹೋದರಿಯರ ಮೇಲೆ ಅತ್ಯಾಚಾರ: ಆರು ಜನರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಇಬ್ಬರು ದಲಿತ ಸಹೋದರಿಯರ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳನ್ನು ಮದುವೆಯಾಗುವಂತೆ ಹುಡುಗಿಯರ ಮೇಲೆ ಒತ್ತಡ ಹೇರಲಾಗುತ್ತಿತ್ತು, ಅವರು ತಮ್ಮ ನಾಲ್ವರು ಸಹಚರರೊಂದಿಗೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ ಎಂದು ಪೋಲೀಸರು ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

ಆರೋಪಿಗಳನ್ನು ಚೋಟು, ಜುನೈದ್, ಸುಹೇಲ್, ಕರೀಮುದ್ದೀನ್, ಆರಿಫ್ ಮತ್ತು ಹಫೀಜ್-ಉರ್-ರೆಹಮಾನ್ ಎಂದು ಗುರುತಿಸಲಾಗಿದೆ. ಜುನೈದ್‌ನನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಬುಲೆಟ್ ತಗುಲಿ ಗಾಯಗೊಂಡ ನಂತರ ಬಂಧಿಸಲಾಗಿದೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಸಂಜೀವ್ ಸುಮನ್, ಚೋಟು ಹೊರತುಪಡಿಸಿ ಎಲ್ಲಾ ಆರೋಪಿಗಳು ಲಖಿಂಪುರ ಖೇರಿಯ ಲಾಲ್‌ಪುರ ಗ್ರಾಮದವರು ಎನ್ನಲಾಗಿದೆ. ಬಾಲಕಿಯರ ನೆರೆಮನೆಯವನಾಗಿದ್ದ ಚೋಟು ಎಂಬಾತ ಇಬ್ಬರು ಬಾಲಕಿಯರನ್ನು ಆರೋಪಿಗಳಿಗೆ ಪರಿಚಯಿಸಿದ್ದ. ಅವರನ್ನೂ ಬಂಧಿಸಲಾಗಿದೆ.

ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 376 ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೂವರು ವೈದ್ಯರ ಸಮಿತಿಯು ಸಂತ್ರಸ್ತರ ಮರಣೋತ್ತರ ಪರೀಕ್ಷೆಯನ್ನು ಮಾಡುತ್ತದೆ ಮತ್ತು ಅದೇ ಪ್ರಕ್ರಿಯೆಯ ವೀಡಿಯೊಗ್ರಫಿಯನ್ನು ಸಹ ಮಾಡಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.

ಘಟನೆಯ ಹಿನ್ನೆಲೆ:
ಉತ್ತರ ಪ್ರದೇಶದ ಲಖಿಂಪುರ ಖೇರಿ ಎಂಬಲ್ಲಿ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಹದಿಹರೆಯದ ಬಾಲಕಿಯರ ಮೃತದೇಹ ಪತ್ತೆಯಾಗಿತ್ತು. ತನ್ನ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಅವರ ತಾಯಿ ಆರೋಪಿಸಿದ್ದರು. ಬಾಲಕಿಯರನ್ನು ಮೋಟಾರ್‌ಸೈಕಲ್‌ಗಳಲ್ಲಿ ಅಪಹರಿಸಿ, ಅತ್ಯಾಚಾರ ಎಸಗಲಾಗಿದೆ ಮತ್ತು ಅವರ ದೇಹಗಳನ್ನು ಮರಕ್ಕೆ ನೇತುಹಾಕಲಾಗಿದೆ ಎಂದು ಅವರ ತಾಯಿ ಪೊಲೀಸರಿಗೆ ತಿಳಿಸಿದ್ದರು. ತಾಯಿಯ ದೂರಿನ ಮೇರೆಗೆ ತನಿಖೆಯ ಕೈಗೆತ್ತಿಕೊಂಡ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!