ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ, ಸಜೀವ ದಹನ: ಆರೋಪಿಗಳಿಗೆ ಮರಣದಂಡನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಪ್ರಾಪ್ತೆ ಮೇಲೆ ಕಳೆದ ವರ್ಷ ನಡೆದಿದ್ದ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಂತಕರಿಗೆ ರಾಜಸ್ಥಾನದ ಬಿಲ್ವಾರ ವಿಶೇಷ ಕೋರ್ಟ್‌ ಮರಣದಂಡನೆ ವಿಧಿಸಿದೆ .

ನ್ಯಾಯಮೂರ್ತಿ ಅನಿಲ್‌ ಗುಪ್ತಾ ಇದ್ದ ನ್ಯಾಯಪೀಠ, ದೋಷಿಗಳಾದ ಕಲು ಮತ್ತು ಕಹ್ನಾ ಎಂಬ ಸಹೋದರರಿಗೆ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದು, ಇದು ಅಪರೂಪಗಳಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದೆ.

ಬಾಲಕಿಯನ್ನು ಅತ್ಯಾಚಾರಗೈದು ಬಳಿಕ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೇಬಿಯಾ ಬುಡಗಟ್ಟು ಜನಾಂಗದ ಇಬ್ಬರು ಸಹೋದರರಾದ ಕಲು ಮತ್ತು ಕಹ್ನಾ ವಿರುದ್ಧ ಪೋಕ್ಸೋ ಕಾಯ್ದೆಯಲ್ಲಿ ಕೇಸು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೂರು ಮಹಿಳೆಯರು ಸೇರಿದಂತೆ ಇತರೆ ಏಳು ಜನರ ವಿರುದ್ಧವೂ ಕೇಸ್‌ ದಾಖಲಿಸಲಾಗಿತ್ತು. ಅವರು ಆರೋಪಿಗಳಿಗೆ ಸಾಕ್ಷ್ಯಾಧಾರ ನಾಶಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿದ್ದರು.

ಇದೀಗ ಕಲು ಮತ್ತು ಕಹ್ನಾಗೆ ಮರಣದಂಡನೆ ವಿಧಿಸಿರುವ ಕೋರ್ಟ್‌ ಉಳಿದ ಏಳು ಜನರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ. ಇದೀಗ ಇವರ ಬಿಡುಗಡೆ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಇನ್ನು ಮೂವರು ಮಹಿಳೆಯರಲ್ಲಿ ಇಬ್ಬರು ಕಲು ಮತ್ತು ಕಹ್ನಾನ ಪತ್ನಿಯರು ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಸರ್ಕಾರಿ ವಕೀಲ ಮಹಾವೀರ್‌ ಸಿಂಗ್‌ ಕಿಶ್ವಂತ್‌ ಪ್ರತಿಕ್ರಿಯಿಸಿದ್ದು, ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲು ಮತ್ತು ಕಹ್ನಾಗೆ ಮರಣದಂಡನೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!