ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿಯ ಮನೆ ಧ್ವಂಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ( Madhya Pradesh) ಗುನಾದಲ್ಲಿ ಮಹಿಳೆಯೊಬ್ಬರ ಮೇಲೆ ಒಂದು ತಿಂಗಳ ಕಾಲ ಅತ್ಯಾಚಾರ (Rape) ನಡೆಸಿಚಿತ್ರಹಿಂಸೆ ನೀಡಿದ ಆರೋಪಿಯ ಮನೆಯನ್ನು ಜೆಸಿಬಿಯಿಂದ (JCB) ಧ್ವಂಸ ಮಾಡಲಾಗಿದೆ.

ಭಾನುವಾರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಮನೆಯನ್ನು ನೆಲಸಮಗೊಳಿಸಿದ್ದಾರೆ.

ಅಯಾನ್ ಪಠಾಣ್ ತನ್ನ ನೆರೆ ಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಮಹಿಳೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಒಂದು ತಿಂಗಳ ಕಾಲ ಚಿತ್ರಹಿಂಸೆ ನೀಡಿದ್ದನು

ಕೂಲಿ ಕೆಲಸ ಮಾಡುತ್ತಿದ್ದ ಅಯಾನ್ ಮಹಿಳೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ. ಆಕೆಯ ಆಸ್ತಿಯನ್ನು ತನಗೆ ನೀಡದ್ದಕ್ಕೆ ಮಹಿಳೆಯನ್ನು ಹೊಡೆದು ಆಕೆಯ ಕಣ್ಣು ಮತ್ತು ಬಾಯಿಗೆ ಮೆಣಸಿನ ಪುಡಿಯನ್ನು ತುಂಬಿದ್ದ. ಅಷ್ಟೇ ಅಲ್ಲದೇ ಹೊರಗಡೆ ಆಕೆಯ ಧ್ವನಿ ಕೇಳದೇ ಇರಲು ಬಾಯಿಗೆ ಅಂಟುಗಳನ್ನು ಹಾಕಿದ್ದನು.

ಅಷ್ಟೇ ಅಲ್ಲದೇ ತನ್ನ ಸಂಬಂಧಿಕರ ನೆರವಿನಿಂದ ಮಹಿಳೆಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದನು. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ದಾಖಲಿಸಿದ ನಂತರ ಅಯಾನ್‌ನನ್ನು ಈಗ ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!