ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ: ಆರೋಪಿಗೆ ಸಿಕ್ಕಿತು ರಿಲೀಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ ಮಗಳು ವಮಿಕಾ ಮೇಲೆ ಅತ್ಯಾಚಾರದ ಬೆದರಿಕೆಯೊಡ್ಡಿದ ಆರೋಪಿಯ ಮೇಲೆ ದಾಖಲಾಗಿದ್ದ ಚಾರ್ಜ್‌ಶೀಟ್ ಹಾಗೂ ಎಫ್‌ಐಆರ್‌ ರದ್ದುಪಡಿಸಿ ಬಾಂಬೆ ಹೈಕೋರ್ಟ್‌(Bombay High Court) ರಿಲೀಫ್ ನೀಡಿದೆ.

2021ರಲ್ಲಿ ಭಾರತದ ಆತಿಥ್ಯದಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದ ಟೀಮ್​ ಇಂಡಿಯಾ ಪಾಕಿಸ್ತಾನ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ 23 ವರ್ಷದ ಹೈದರಾಬಾದ್‌ನ ರಾಮನಾಗೇಶ್ ಶ್ರೀನಿವಾಸ್ ಅಕುಬಾತಿನಿ ಎಂಬ ವ್ಯಕ್ತಿ ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಆಕ್ರೋಶ ಮತ್ತು ಕೊಹ್ಲಿಯ ಪುತ್ರಿ ವಮಿಕಾ ಮೇಲೆ ಲೈಂಗಿಕ ಬೆದರಿಕೆ ಹಾಕಿದ್ದನು.

ಈ ಸಂಬಂಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್‌ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗಡ್ಕರಿ ಹಾಗೂ ನ್ಯಾಯಮೂರ್ತಿ ಪಿ.ಡಿ. ನಾಯಕ್ ಅವರನ್ನೊಳಗೊಂಡ ನ್ಯಾಯಪೀಠವು ರದ್ದುಪಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!