‘ಅಂತಾರಾಷ್ಟ್ರೀಯ ಫುಟ್ಬಾಲ್’ಗೆ ರಾಫೆಲ್ ವರಾನೆ ವಿದಾಯ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ರಾನ್ಸ್’ನ ಫುಟ್ ಬಾಲ್ ಆಟಗಾರ ರಾಫೆಲ್ ವರಾನೆ ತಮ್ಮ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಗುರುವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ಹಾಕುವ ಮೂಲಕ ಈ ನಿರ್ಧಾರವನ್ನ ಪ್ರಕಟಿಸಿದರು.
ನಾನು ಹಲವಾರು ತಿಂಗಳುಗಳಿಂದ ಅದರ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಅಂತಾರಾಷ್ಟ್ರೀಯ ಫುಟ್ಬಾಲ್’ನಿಂದ ನಿವೃತ್ತರಾಗಲು ಇದು ಸರಿಯಾದ ಸಮಯ ಎಂದು ನಾನು ನಿರ್ಧರಿಸಿದ್ದೇನೆ’ ಎಂದು ವರಾನೆ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಒಂದು ದಶಕದ ಕಾಲ ನಮ್ಮ ಭವ್ಯವಾದ ದೇಶವನ್ನು ಪ್ರತಿನಿಧಿಸುವುದು ನನ್ನ ಜೀವನದ ದೊಡ್ಡ ಗೌರವಗಳಲ್ಲಿ ಒಂದಾಗಿದೆ. ಪ್ರತಿ ಬಾರಿ ನಾನು ಈ ವಿಶೇಷ ನೀಲಿ ಅಂಗಿಯನ್ನು ಧರಿಸಿದಾಗ ನನಗೆ ಅಪಾರ ಹೆಮ್ಮೆ ಎನಿಸಿತು ಎಂದು ಅವರು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!