ಸಾಮಾಗ್ರಿಗಳು
ಹುಣಸೆಹಣ್ಣು
ದಾಸವಾಳ ಹೂವು
ಉಪ್ಪು
ಒಣಮೆಣಸಿನಕಾಯಿ
ಸಾಸಿವೆ
ತುಪ್ಪ
ಬೆಲ್ಲ
ಮಾಡುವ ವಿಧಾನ
ಹುಣಸೆಹಣ್ಣಿಗೆ ನೀರು ಹಾಕಿ ಅದರ ಹುಳಿಯನ್ನು ತೆಗೆದು ಇಡಿ. ಆ ರಸಕ್ಕೆ ಬೆಲ್ಲ ಹಾಕಿ ನಂತರ ಅದಕ್ಕೆ ದಾಸವಾಳದ ಹೂವನ್ನು ಹೆಚ್ಚಿ ಹಾಕಿ.
ನಂತರ ಅದನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಹಸಿವಾಸನೆ ಹೋದ ನಂತರ ತುಪ್ಪದ ಒಗರಣೆ ಕೊಟ್ರೆ ಗೊಜ್ಜು ರೆಡಿ