Friday, November 21, 2025

Rasam | ಶೀತ-ಜ್ವರ ಬಂದು ರುಚಿನೇ ಸಿಗ್ತಿಲ್ವಾ? ಹಾಗಿದ್ರೆ ಈ ಹುಣಸೆ ಹಣ್ಣಿನ ರಸಂ ಟ್ರೈ ಮಾಡಿ

ಶೀತ ಜ್ವರ ಬಂದಾಗ ನಾಲಿಗೆ ರುಚಿನೇ ಇರಲ್ಲ. ಇಂತಹ ಸಮಯದಲ್ಲಿ ಹುಳಿ-ಕಾರದ ರಸಂ ಬೇಕೆಂದರೆ ಹುಣಸೆ ಹಣ್ಣಿನ ರಸಂ ಕುಡಿದರೆ ಸಾಕು! ಹುರಿದ ಬೆಳ್ಳುಳ್ಳಿ, ಸಾಸಿವೆ ಸುವಾಸನೆ, ಹುಣಸೆ ಹಣ್ಣಿನ ಹುಳಿತನ ಇವೆಲ್ಲ ಸೇರಿ ಸಾಂಪ್ರದಾಯಿಕ ರುಚಿಯನ್ನು ಕೊಡುತ್ತದೆ.

ಬೇಕಾಗುವ ಸಾಮಗ್ರಿಗಳು:

ಹುಣಸೆ ಹಣ್ಣು – 1 ನಿಂಬೆ ಗಾತ್ರ
ಹಸಿಮೆಣಸಿನಕಾಯಿ – 2
ಟೊಮೇಟೊ – 1
ಬೆಳ್ಳುಳ್ಳಿ – 5 ಎಸಳು
ರಸಂ ಪುಡಿ – 1 ಟೀಸ್ಪೂನ್
ತೆಂಗಿನ ಎಣ್ಣೆ – 1 ಟೇಬಲ್ ಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ಹಸಿಮೆಣಸಿನ ಸೊಪ್ಪು – 2 ಟೇಬಲ್ ಸ್ಪೂನ್
ಅರಶಿನ – 1 ಚಿಟಿಕೆ
ಉಪ್ಪು – ರುಚಿಗೆ ತಕ್ಕಂತೆ
ನೀರು – 3 ಕಪ್

ತಯಾರಿಸುವ ವಿಧಾನ:

ಮೊದಲಿಗೆ ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು ಅದನ್ನು ಚೆನ್ನಾಗಿ ಹಿಸುಕಿ ಹುಣಸೆ ನೀರು ತಯಾರಿಸಿಡಿ.

ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು ಹಾಕಿ. ನಂತರ ಬೆಳ್ಳುಳ್ಳಿ ತುಂಡು ಮಾಡಿ ಹಾಕಿ ಬಂಗಾರ ಬಣ್ಣ ಬರುವವರೆಗೂ ಹುರಿಯಿರಿ. ಈಗ ಟೊಮೇಟೊ ಸಣ್ಣಗೆ ಕತ್ತರಿಸಿ ಹಾಕಿ ಮೃದುವಾಗುವವರೆಗೂ ಬೇಯಿಸಿ. ಹಳದಿ ಪುಡಿ ಸೇರಿಸಿ. ನಂತರ ಹುಣಸೆ ನೀರು, ರಸಂ ಪುಡಿ, ಉಪ್ಪು ಹಾಕಿ ಮಧ್ಯಮ ಉರಿಯಲ್ಲಿ 5–7 ನಿಮಿಷ ಕುದಿಸಿ. ಕುದಿಯುವಾಗ ಜೀರಿಗೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 1 ನಿಮಿಷ ಕುದಿಸಿ ಗ್ಯಾಸ್ ಆಫ್ ಮಾಡಿ.

error: Content is protected !!