Saturday, March 25, 2023

Latest Posts

ಯುವ ನಟನ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಕಮೆಂಟ್ಸ್‌: ʻಇನ್ನೊಂದು ಆತ್ಮಹತ್ಯೆ ನೋಡಬೇಕಾʼ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಆ್ಯಂಕರ್ ಮತ್ತು ನಟಿ ರಶ್ಮಿ ಗೌತಮ್ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಪ್ರಶ್ನಿಸಿ ಆಗಾಗ ಟ್ವೀಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ನಾಯಕ ನಾಗಶೌರ್ಯ ಮಾಡಿದ ಕೆಲಸವೊಂದಕ್ಕೆ ಈಕೆ ಪ್ರತಿಕ್ರಿಯಿಸಿದ್ದಾರೆ. ಫೆಬ್ರವರಿ 28 ರಂದು ರಸ್ತೆಯಲ್ಲಿ ಹುಡುಗನೊಬ್ಬ ಹುಡುಗಿ ಮೇಲೆ ಕೈಮಾಡಿದ್ದನ್ನು ಪ್ರಶ್ನಿಸಿ ಕ್ಷಮೆ ಕೇಳುವಂತೆ ತಾಕೀತು ಮಾಡಿದ್ದರು. ಆ ಹುಡುಗಿ ತನ್ನ ಪ್ರೇಯಸಿ, ಅವಳಿಗೆ ಹೊಡೆಯುವ ಹಕ್ಕಿದೆ ಎಂದು ವಾದ ಮಾಡುತ್ತಾನೆ.

ಆ ವೇಳೆ ಯಾರೋ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ವೈರಲ್ ಆಗಿದೆ. ಈ ವಿಡಿಯೋ ನೋಡಿದ ಕೆಲ ನೆಟ್ಟಿಗರು ನಾಗಶೌರ್ಯ ಅವರನ್ನು ಕೊಂಡಾಡುತ್ತಿದ್ದಾರೆ, ಆದರೆ ಕೆಲವರು ಅವನ ಲವರ್‌ ಅವನಿಷ್ಟ ಮಧ್ಯದಲ್ಲಿ ನಿಂಗೇನು ಕೆಲಸ? ಹುಡುಗಿ ಏನೋ ತಪ್ಪು ಮಾಡಿದ್ದಾಳೆ, ಅದಕ್ಕೇ ಹೊಡೆದಿದ್ದಾನೆ ಎಂದು ಕಮೆಂಟ್ಸ್‌ ಮಾಡ್ತಿದಾರೆ.

ಇದಕ್ಕೆ ರಶ್ಮಿ, ಕಮೆಂಟ್ ಗಳನ್ನು ನೋಡಿ ತುಂಬಾ ನಾಚಿಕೆಯಾಗುತ್ತಿದೆ. ಆ ಹುಡುಗಿ ಯಾವ ಒತ್ತಡದಲ್ಲಿದ್ದಾಳೆಂದು ಯಾರಿಗೆ ಗೊತ್ತು. ಈಗಾಗೇ ರ್ಯಾಗಿಂಗ್‌ ಕಾಟದಿಂದ ಅತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಮತ್ತೊಂದು ಆತ್ಮಹತ್ಯೆಯನ್ನು ನೋಡಲು ಬಯಸುವಿರಾ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿನಿ ಪ್ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರಶ್ಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ರಶ್ಮಿ ಅವರ ಟ್ವೀಟ್‌ಗೆ ನೆಟ್ಟಿಗರು ಕೂಡ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!