ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ತಿಂಗಳುಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಒಂದು ವೈರಲ್ ಆಗಿತ್ತು. ಇದರಿಂದಾಗಿ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಡೀಪ್‌ಫೇಕ್ ವಿಡಿಯೋ ಬಗ್ಗೆ ಎಲ್ಲೆಡೆ ಕಳವಳ ಸೃಷ್ಟಿಯಾಗಿತ್ತು.
ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದೆ. ಯುವತಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗೆ ರಶ್ಮಿಕಾ ಮುಖ ಅಟ್ಯಾಚ್ ಮಾಡಲಾಗಿದೆ. ಡೀಪ್‌ಫೇಕ್ ಬಗ್ಗೆ ಗೊತ್ತಿಲ್ಲದವರು ಇದು ರಿಯಲ್ ಎಂದುಕೊಳ್ಳುವಷ್ಟು ಕ್ಲೀನ್ ಎಡಿಟಿಂಗ್ ಮಾಡಲಾಗಿದೆ.
ಈ ವಿಡಿಯೋಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ರಶ್ಮಿಕಾ ಅವರನ್ನೇ ಯಾಕೆ ಟಾರ್ಗೆಟ್ ಮಾಡ್ತೀರಿ ಎಂದು ಗರಂ ಆಗಿದ್ದಾರೆ.
View this post on Instagram