CINE| `ಡೀಪ್‌ಫೇಕ್’ ವಿಡಿಯೋ ಬಗ್ಗೆ ಸೆಲೆಬ್ರಿಟಿಗಳು ಸೀರಿಯಸ್, ಬೆಂಬಲಿಸಿದ್ದಕ್ಕೆ ರಶ್ಮಿಕಾ ಧನ್ಯವಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಎರಡು ದಿನಗಳಿಂದ ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋವೊಂದು ವೈರಲ್ ಆಗಿದೆ. ಡೀಪ್ ನೆಕ್ ಕಪ್ಪು ಡ್ರೆಸ್‌ನಲ್ಲಿ ಲಿಫ್ಟ್‌ಗೆ ರಶ್ಮಿಕಾ ಪ್ರವೇಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಮತ್ತು ನೆಟಿಜನ್‌ಗಳು ಶಾಕ್ ಆಗಿದ್ದಾರೆ. ಆದರೆ, ನಕಲಿ ವಿಡಿಯೋ ಸೃಷ್ಟಿಸಲು AI ಬಳಸಿರುವುದು ಗೊತ್ತಾಗುತ್ತಿದ್ದಂತೆಯೇ ಹಲವು ಸೆಲೆಬ್ರಿಟಿಗಳು, ಅಭಿಮಾನಿಗಳು, ನೆಟ್ಟಿಗರು ರಶ್ಮಿಕಾಗೆ ಬೆಂಬಲವಾಗಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಇಂತಹ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ರಶ್ಮಿಕಾ ಅವರ ನಕಲಿ ವಿಡಿಯೋ ಬಗ್ಗೆ ಅಮಿತಾಬ್ ಬಚ್ಚನ್, ಎಮ್‌ಎಲ್‌ಸಿ ಕವಿತಾ, ನಾಗ ಚೈತನ್ಯ, ಚಿನ್ಮಯಿ ಶ್ರೀಪಾದ ಸೇರಿದಂತೆ ಹಲವು ನಟ, ನಟಿಯರು ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಕೂಡ ಪ್ರತಿಕ್ರಿಯಿಸಿದ್ದು, ಗಂಭೀರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಂತೆಯೇ ತನಗೆ ಬೆಂಬಲ ನೀಡಿದವರಿಗೆ ಧನ್ಯವಾದವನ್ನು ತಿಳಿಸಿದರು.

ಸದ್ಯ ಟ್ವಿಟ್ಟರ್ ನಲ್ಲಿ ರಶ್ಮಿಕಾರ ಫೇಕ್‌ ವಿಡಿಯೋ ಟ್ರೆಂಡಿಂಗ್ ಆಗಿದ್ದು, ದುಷ್ಟರಿಗೆ ತಂತ್ರಜ್ಞಾನ ಬಳಕೆಯಾಗುತ್ತಿದೆ ಎಂದು ಹಲವು ಸೆಲೆಬ್ರಿಟಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳಬಾರದೆಂಬ ಪೋಸ್ಟ್‌ಗಳು ಹೆಚ್ಚಾಗಿವೆ.

ರಶ್ಮಿಕಾ ತಮ್ಮನ್ನು ಬೆಂಬಲಿಸಿದವರ ಟ್ವೀಟ್‌ಗಳನ್ನು ಮರು-ಶೇರ್ ಮಾಡಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಇಂತಹ ಸಮಯದಲ್ಲಿ ತುಂಬಾ ಜನ ನನ್ನ ಪರವಾಗಿ ನಿಂತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!