ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಹಾರಿ ಸಉಮಾರು ಸಮಯವಾಗಿದೆ, ಒಂದಾದಂತೆ ಒಂದು ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ.
ಡಿಸೆಂಬರ್‌ನಲ್ಲಿ ರಶ್ಮಿಕಾ ಹಾಗೂ ರಣ್‌ಬೀರ್ ಅಭಿನಯದ ಅನಿಮಲ್ ಸಿನಿಮಾ ತೆರೆಮೇಲೆ ಬರಲಿದೆ. ಇಂದು ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಹಾಡಿನಲ್ಲಿ ಸಾಕಷ್ಟು ಕಿಸ್ಸಿಂಗ್ ಸೀನ್ಸ್ ಇದೆ.
ಈ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದು, ಬಾಲಿವುಡ್‌ನಲ್ಲಿ ಲಿಪ್‌ಲಾಕ್ ಸೀನ್‌ಗಳು ಸಾಮಾನ್ಯ, ರಶ್ಮಿಕಾ ಕೂಡ ಬಾಲಿವುಡ್‌ಗೆ ಸೇರಿಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳಿನಲ್ಲಿ ಹಾಡು ರಿಲೀಸ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ರಶ್ಮಿಕಾ ಫ್ಯಾನ್ಸ್ ಸಿನಿಮಾ ನೋಡೋದಕ್ಕೆ ಉತ್ಸುಕರಾಗಿದ್ದಾರೆ.