ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾಗೆ ಧನುಷ್ ಹೀರೋ!
ಹೌದು, ಬಾಲಿವುಡ್‌ಗೆ ರಶ್ಮಿಕಾ ಕಾಲಿಟ್ಟ ನಂತರ ಸೌತ್‌ನಲ್ಲಿ ರಶ್ಮಿಕಾ ಹವಾ ಕಡಿಮೆಯಾಗಿದೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ರಶ್ಮಿಕಾ ಸೌತ್‌ನಲ್ಲಿ ಈಗಲೂ ಕ್ವೀನ್ ಆಗಿದ್ದಾರೆ. ಖ್ಯಾತ ನಟ ಧನುಷ್‌ರ ಡಿ21ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರಶ್ಮಿಕಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಡಿಫರೆಂಟ್ ಗೆಟಪ್‌ನಲ್ಲಿ ರಶ್ಮಿಕಾರನ್ನು ನೋಡೋದಕ್ಕೆ ಕಾಯುತ್ತಿದ್ದಾರೆ. ತಮಿಳಿನಲ್ಲಿ ಇದು ರಶ್ಮಿಕಾ ಎರಡನೇ ಸಿನಿಮಾ ಆಗಿದೆ. ವಿಜಯ್ ದಳಪತಿ ಜತೆ ನಟಿಸಿದ ವಾರಿಸು ಕೂಡ ಬಿಗ್ ಹಿಟ್ ಆಗಿದೆ.