ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಪಲ್ ಅನ್ನೋದು ಗುಟ್ಟಾಗಿ ಉಳಿದಂತೆ ಕಾಣುತ್ತಿಲ್ಲ.
ಅನಿಮಲ್ ಸಿನಿಮಾದ ಪ್ರಮೋಷನ್ಸ್‌ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ, ನಟ ಬಾಲಯ್ಯ ನಡೆಸಿಕೊಡುವ ಎನ್‌ಬಿಕೆ ಕಾರ್ಯಕ್ರಮದಲ್ಲಿ ರಶ್ಮಿಕಾ ಹಾಗೂ ರಣ್‌ಬೀರ್ ಭಾಗಿಯಾಗಿದ್ದು, ಇಲ್ಲಿ ವಿಜಯ್ ಬಗ್ಗೆ ಪ್ರಶ್ನೆಗಳು ಎದುರಾಗಿವೆ.
ರಣ್‌ಬೀರ್ ಅಥವಾ ವಿಜಯ್ ಇಬ್ಬರಲ್ಲಿ ಯಾರು ಬೆಸ್ಟ್ ಎಂದು ಕೇಳಿದಾಗ ರಶ್ಮಿಕಾ ಮುಖದಲ್ಲಿ ನಗು ಮೂಡುತ್ತದೆ. ಮಧ್ಯೆ ವಿಜಯ್ ಕರೆ ಮಾಡಿ ವಾಟ್ಸಪ್ ರೇ ಎಂದು ಕೇಳಿದ್ದು, ರಶ್ಮಿಕಾ ವಿಜಯ್ ದನಿ ಕೇಳಿ ನಾಚಿ ನೀರಾಗಿದ್ದಾರೆ.
ಹಿಂದೆಂದೂ ರಶ್ಮಿಕಾ ಮುಖದಲ್ಲಿ ಈ ರೀತಿ ಪ್ರೀತಿಯ ನಗು ಕಂಡೇ ಇಲ್ಲ ಎಂದು ಫ್ಯಾನ್ಸ್ ಹೇಳ್ತಿದ್ದಾರೆ.